- Kannada News Photo gallery Pooja Hegde says chemistry with Prabhas in Radhe Shyam worked and will show magic on screen
Radhe Shyam: ‘ತೆರೆಯ ಮೇಲೆ ನಾವೀರ್ವರೂ ಸುಂದರವಾಗಿ ಕಾಣಿಸಿದ್ದೇವೆ’; ಪ್ರಭಾಸ್ ಬಗ್ಗೆ ಪೂಜಾ ವಿಶೇಷ ಮಾತು
Pooja Hegde | Prabhas: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಡುವೆ ಅಸಮಾಧಾನವಿದೆ ಎಂದು ಸುದ್ದಿಯಾಗಿತ್ತು. ಇದೀಗ ನಟಿ ಮಾತನಾಡಿ, ಪ್ರಭಾಸ್ ಜತೆಗೆ ‘ರಾಧೆ ಶ್ಯಾಮ್’ನಲ್ಲಿ ಕಾಣಿಸಿಕೊಂಡಿದ್ದರ ಅನುಭವ ಹಂಚಿಕೊಂಡು ಎಲ್ಲಾ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ. ಪ್ರಭಾಸ್ ಜತೆಗಿನ ಕೆಮಿಸ್ಟ್ರಿ ವರ್ಕೌಟ್ ಆಗಿದೆ ಎಂದಿರುವ ನಟಿ, ತೆರೆಯ ಮೇಲೆ ಈರ್ವರೂ ಸುಂದರವಾಗಿ ಕಾಣಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
Updated on:Mar 10, 2022 | 9:38 AM

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜತೆಯಾಗಿ ನಟಿಸಿರುವ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ಪ್ರಭಾಸ್ ಜತೆ ತೆರೆಹಂಚಿಕೊಂಡಿದ್ದರ ಬಗ್ಗೆ ಪೂಜಾ ಮಾತನಾಡಿದ್ದಾರೆ.

ಕೆಲವು ತಾರೆಯರೊಂದಿಗೆ ಮೊದಲ ಬಾರಿಗೆ ನಟಿಸುತ್ತೇವೆ. ಆದರೆ ತೆರೆಯ ಮೇಲೆ ಅದು ಬಹಳ ಅದ್ಭುತ ರೂಪದಲ್ಲಿ ಅರ್ಥಾತ್ ಮ್ಯಾಜಿಕ್ನಂತೆ ಮೂಡಿಬಂದಿರುತ್ತದೆ. ಪ್ರಭಾಸ್ ಜತೆಗೂ ಹೀಗೆಯೇ ಆಗಿದೆ. ತೆರೆಯ ಮೇಲೆ ಇಬ್ಬರೂ ಅತ್ಯುತ್ತಮವಾಗಿ ಕಾಣಿಸಿದ್ದೇವೆ ಎಂದು ಪೂಜಾ ಹೇಳಿಕೊಂಡಿದ್ದಾರೆ.

ಈ ಹಿಂದೆ ಪೂಜಾ ಅಲ್ಲು ಅರ್ಜುನ್, ಹೃತಿಕ್ ರೋಷನ್, ಅಖಿಲ್ ಅಕ್ಕಿನೇನಿ ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದರು. ಅಲ್ಲಿಯೂ ಕೂಡ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು ಎನ್ನುವುದು ಪೂಜಾ ಮಾತು.

ಮೊಹೆಂಜೋದಾರೋ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ಕಾಣಿಸಿಕೊಂಡಿದ್ದ ಪೂಜಾ ಗಮನ ಸೆಳೆದಿದ್ದರು. ನಟಿ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಸದ್ಯ ಪೂಜಾ ರಾಧೆ ಶ್ಯಾಮ್ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಪೂಜಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.

ರಣವೀರ್ ಸಿಂಗ್ ಜತೆಗೆ ‘ಸರ್ಕಸ್’ನಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ.
Published On - 9:38 am, Thu, 10 March 22



