- Kannada News Photo gallery Popular TV actor Snehal Rai revealed being married to 21 year older politician Madhvendra Kumar Rai
Snehal Rai: ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾಗಿದ್ದೇನೆ: ನಟಿ ಸ್ನೇಹಲ್ ರೈ
ನಟಿ, ನಿರೂಪಕಿ ಆಗಿ ಗುರುತಿಸಿಕೊಂಡಿರುವ ಸ್ನೇಹಲ್ ರೈ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗಾ 10 ವರ್ಷ ಹಿಂದೆ ನಡೆದ ವಿವಾಹವನ್ನು ಈಗ ಬಹಿರಂಗಪಡಿಸಿದ್ದಾರೆ.
Updated on:May 28, 2023 | 12:49 PM

ಕಿರುತೆರೆ ನಟಿ ಸ್ನೇಹಲ್ ರೈ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಇದೀಗಾ ಎಲ್ಲೆಡೆ ವೈರಲ್ ಆಗಿದೆ.

ನಟಿ, ನಿರೂಪಕಿ ಆಗಿ ಗುರುತಿಸಿಕೊಂಡಿರುವ ಸ್ನೇಹಲ್ ರೈ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗಾ 10 ವರ್ಷ ಹಿಂದೆ ನಡೆದ ವಿವಾಹವನ್ನು ಈಗ ಬಹಿರಂಗಪಡಿಸಿದ್ದಾರೆ.

ಇದೀಗ ವಿವಾಹಿತ ಮಹಿಳೆಯರಿಗಾಗಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾಗಿರುವ ಸ್ನೇಹಲ್ ರೈ ಅವರು ರಾಜಕಾರಣಿ ಮಧ್ವೇಂದ್ರ ಕುಮಾರ್ ರೈ ಅವರೊಂದಿಗಿನ ವಿವಾಹದ ಬಗ್ಗೆ ಮಾತನಾಡಿದ್ದಾರೆ.

ತನ್ನ ಹಿರಿಯ ರಾಜಕಾರಣಿ ಮಧ್ವೇಂದ್ರ ಕುಮಾರ್ ರೈ ನನಗಿಂತ 21ವರ್ಷ ದೊಡ್ಡವರು ಎಂದು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದು, ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಸ್ನೇಹಲ್ ರೈ ಇಷ್ಕ್ ಕಾ ರಂಗ್ ಸಫೇದ್ , ಜನ್ಮೋ ಕಾ ಬಂಧನ್, ಇಚ್ಛಪ್ಯಾರಿ ನಾಗಿನ್, ಪರ್ಫೆಕ್ಟ್ ಪತಿ ಮತ್ತು ವಿಶ್ ನಂತಹ ಟಿವಿ ಶೋಗಳಲ್ಲಿ ನಟಿಸಿ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದ್ದರು.

ತಾನು ಆಯೋಜಿಸುತ್ತಿದ್ದ ಕಾರ್ಯಕ್ರಮವೊಂದರಲ್ಲಿ ತಾನು ಮತ್ತು ಮಧ್ವೇಂದ್ರ ಅವರು ಮೊದಲ ಬಾರಿಗೆ ಭೇಟಿಯಾಗಿದ್ದೆವು ಎಂದು ಸ್ನೇಹಲ್ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

ಮದುವೆಯ ಬಗ್ಗೆ ಬಹಿರಂಗಪಡಿಸಿದರೆ ಎಲ್ಲಿ ನನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು ಎಂದು ಮುಚ್ಚಿಟ್ಟಿದ್ದೆ. ಆದರೆ ನನ್ನ ಪತಿ ಹಾಗೂ ಅವರ ಕುಟುಂಬ ಸದಾ ನನ್ನೊಂದಿಗೆ ಬೆಂಬಲವಾಗಿದ್ದಾರೆ ಎಂದು ಸ್ನೇಹಲ್ ಹೇಳಿಕೊಂಡಿದ್ದಾರೆ.
Published On - 12:49 pm, Sun, 28 May 23




