ಡಿಸೆಂಬರ್​ 27ರಂದು ಬಿಡುಗಡೆ ಆಗಲಿದೆ ‘ಔಟ್​ ಆಫ್​ ಸಿಲಬಸ್’ ಸಿನಿಮಾ

Updated on: Dec 11, 2024 | 7:39 PM

ಜಾಹೀರಾತು ಸಂಸ್ಥೆ ಮೂಲಕ ಸ್ಯಾಂಡಲ್​ವುಡ್​ ಜೊತೆ ನಿರಂತರ ನಂಟು ಹೊಂದಿರುವ ಪ್ರದೀಪ್ ದೊಡ್ಡಯ್ಯ ಅವರು ‘ಔಟ್​ ಆಫ್​ ಸಿಲಬಸ್’ ಚಿತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ಕನ್ನಡದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿ ಅನುಭವ ಪಡೆದ ಅವರು ಹೊಸ ಕಥೆಯನ್ನು ಪ್ರೇಕ್ಷಕರಿಗೆ ಹೇಳಲು ಸಜ್ಜಾಗಿದ್ದಾರೆ. ಡಿ27ಕ್ಕೆ ‘ಔಟ್​ ಆಫ್​ ಸಿಲಬಸ್’ ಸಿನಿಮಾ ತೆರೆಕಾಣಲಿದೆ.

1 / 5
ಶ್ರೀಮತಿ ವಿಜಯಕಲಾ ಸುಧಾಕರ್ ಮತ್ತು ತನುಷ್ ಎಸ್.ವಿ. ದೇಸಾಯಿ ಗೌಡ ಅವರು ಜಂಟಿಯಾಗಿ ‘ಔಟ್​ ಫಸ್​ ಸಿಲಬಸ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಯಿತು. ಯುವ ಜನರಿಗೆ ಟ್ರೇಲರ್​ ಇಷ್ಟ ಆಗುತ್ತಿದೆ.

ಶ್ರೀಮತಿ ವಿಜಯಕಲಾ ಸುಧಾಕರ್ ಮತ್ತು ತನುಷ್ ಎಸ್.ವಿ. ದೇಸಾಯಿ ಗೌಡ ಅವರು ಜಂಟಿಯಾಗಿ ‘ಔಟ್​ ಫಸ್​ ಸಿಲಬಸ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಯಿತು. ಯುವ ಜನರಿಗೆ ಟ್ರೇಲರ್​ ಇಷ್ಟ ಆಗುತ್ತಿದೆ.

2 / 5

ಪ್ರದೀಪ್ ದೊಡ್ಡಯ್ಯ ‘ಔಟ್ ಆಫ್​ ಸಿಲಬಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಮಾಡುವುದರ ಜೊತೆಗೆ ಸಿನಿಮಾದ ರಿಲೀಸ್​ ದಿನಾಂಕವನ್ನು ಕೂಡ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

3 / 5

ಒಂದು ಇಂಟರೆಸ್ಟಿಂಗ್ ಕಥಾಹಂದರ ಈ ಸಿನಿಮಾದ ಟ್ರೇಲರ್​ನಲ್ಲಿ ಇದೆ. ಕಾಲೇಜು ವಿದ್ಯಾರ್ಥಿಗಳನ್ನೇ ಕೇಂದ್ರವಾಗಿ ಇಟ್ಟುಕೊಂಡು ಹೆಣೆದಿರುವ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದರ ಝಲಕ್ ಈ ಟ್ರೇಲರ್​ನಲ್ಲಿ ಕಾಣಿಸಿದೆ. ಡಿಸೆಂಬರ್ 27ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

4 / 5

‘ಔಟ್​ ಆಫ್​ ಸಿಲಬಸ್’ ಸಿನಿಮಾದಲ್ಲಿ ಪ್ರದೀಪ್ ದೊಡ್ಡಯ್ಯ ಜೊತೆ ಹೃತಿಕಾ ಶ್ರೀನಿವಾಸ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ರಾಮಕೃಷ್ಣ, ಚಿತ್ಕಲಾ ಬಿರಾದಾರ, ಯೋಗರಾಜ್ ಭಟ್, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಪಾತ್ರವರ್ಗದಲ್ಲಿ ಇದ್ದಾರೆ.

5 / 5

ದೇವ ವಡ್ಡೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಮೇಶ್ ಆರ್.ಬಿ. ಅವರ ಸಂಕಲನ ಈ ಚಿತ್ರಕ್ಕಿದೆ. ಮೋಟಿವೇಷನಲ್​ ಸ್ಪೀಕರ್ ಆಗಿರುವ ಪ್ರದೀಪ್ ದೊಡ್ಡಯ್ಯ ಹಲವು ವರ್ಷಗಳಿಂದ ಚಿತ್ರರಂಗದ ಸಂಪರ್ಕದಲ್ಲಿದ್ದಾರೆ. ಈಗ ಅವರ ‘ಔಟ್​ ಆಫ್​ ಸಿಲಬಸ್’ ಚಿತ್ರ ಬರುತ್ತಿದೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us