ಪತಿ ನಿಕ್ ಜೋನಸ್ ಜೊತೆ ಅಯೋಧ್ಯೆಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ
Priyanka-Nick: ಹಾಲಿವುಡ್ನಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ ಹಾಗೂ ಮಗಳೊಟ್ಟಿಗೆ ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದರು. ಇಲ್ಲಿವೆ ಚಿತ್ರಗಳು.
Updated on: Mar 20, 2024 | 5:34 PM

ಹಾಲಿವುಡ್ನಲ್ಲಿ ಸೆಟಲ್ ಆಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ ಹಾಗೂ ಮಗಳೊಡನೆ ಭಾರತಕ್ಕೆ ಬಂದಿದ್ದಾರೆ.

ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದ ಪ್ರಿಯಾಂಕಾ ಹಾಗೂ ನಿಕ್ ಜೋನಸ್, ಫರ್ಹಾನ್ ಅಖ್ತರ್ ನಿವಾಸಕ್ಕೆ ಹಾಗೂ ಇನ್ನೂ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳಿಗೆ ಭೇಟಿ ನೀಡಿದ್ದರು.

ಇಂದು (ಮಾರ್ಚ್ 20) ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಜೊತೆಗೂಡಿ ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದಿದ್ದಾರೆ.

ತಿಳಿ ಬಣ್ಣದ ಸೀರೆಯುಟ್ಟಿದ್ದ ಪ್ರಿಯಾಂಕಾ ಮಗಳನ್ನು ಕಂಕುಳಲ್ಲಿ ಹೊತ್ತು ದೇವಾಲಯಕ್ಕೆ ಬಂದಿದ್ದರು. ಪ್ರಿಯಾಂಕಾ ಪತಿ ನಿಕ್ ಜೋನಸ್ ಸಹ ಭಾರತೀಯ ಉಡುಗೆ ತೊಟ್ಟು ಬಂದಿದ್ದರು.

ಬಾಲರಾಮನ ದರ್ಶನ ಪಡೆದ ಪ್ರಿಯಾಂಕಾ-ನಿಕ್ ಜೋನಸ್ ದಂಪತಿಗೆ ದೇವಾಲಯದ ಪೂಜಾರಿಗಳು ತೀರ್ಥ, ಪ್ರಸಾದ ನೀಡಿದರು.

ದೇವಾಲಯಕ್ಕೆ ಬಂದಿದ್ದ ಈ ತಾರಾ ಜೋಡಿಯನ್ನು ನೋಡಲು ಜನ ಗುಂಪು ಗೂಡಿದರು. ದೇವಾಲಯದ ಸಿಬ್ಬಂದಿ ಸಹ ಪ್ರಿಯಾಂಕಾ-ನಿಕ್ ಜೋನಸ್ ಜೊತೆಗೆ ಫೋಟೊ ತೆಗೆಸಿಕೊಂಡರು.




