ನಟಿ ಪ್ರಿಯಾಂಕಾ ಚೋಪ್ರಾ ಸಾಕಷ್ಟು ಖುಷಿಯಾಗಿದ್ದಾರೆ. ಅವರ ಬಾಳಲ್ಲಿ ಸಾಕಷ್ಟು ಒಳ್ಳೆಯ ಘಟನೆಗಳು ನಡೆಯುತ್ತಿವೆ. ಈ ವಿಚಾರಗಳನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.
ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಬಿಟ್ಟು ಹಾಲಿವುಡ್ಗೆ ತೆರಳಿದ್ದಾರೆ. ಅಲ್ಲಿನ ಮಂದಿ ಅವರನ್ನು ಒಪ್ಪಿಕೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಪ್ರಿಯಾಂಕಾ ನಟನೆಯ ‘ಸಿಟಾಡೆಲ್’ ಇಂಗ್ಲೆಂಡ್ನಲ್ಲಿ ಪ್ರಸಾರ ಕಂಡಿದೆ. ಈ ಖುಷಿಯನ್ನು ಅವರು ಫೋಟೋ ಮೂಲಕ ಹಂಚಿಕೊಂಡಿದ್ದಾರೆ. ಸ್ಪೈ ಕಥೆ ಹೊಂದಿರುವ ಈ ಸೀರಿಸ್ನ ನೋಡುವಂತೆ ಅಭಿಮಾನಿಗಳ ಬಳಿ ಅವರು ಕೋರಿದ್ದಾರೆ.
‘ಸಿಟಾಡೆಲ್’ನಲ್ಲಿ ಸಾಕಷ್ಟು ಆ್ಯಕ್ಷನ್ ಇದೆ ಅನ್ನೋದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ. ಹೊಸ ಮಾದರಿಯ ಸಿನಿಮಾಗಳನ್ನು ಪ್ರಿಯಾಂಕಾ ಅವರು ಒಪ್ಪಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದಾರೆ. ಇದಕ್ಕೆ ಅವರು ಮಾಲ್ತಿ ಎಂದು ಹೆಸರು ಇಟ್ಟಿದ್ದಾರೆ. ಈ ಫೋಟೋಗಳನ್ನು ಇತ್ತೀಚೆಗೆ ಅವರು ರಿವೀಲ್ ಮಾಡಿದ್ದರು.