
ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ನಂತರದಲ್ಲಿ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿಯೇ ಉದ್ಯಮ ಆರಂಭಿಸಿದ್ದಾರೆ. ಅವರು ಮದುವೆ ಬಳಿಕ ಭಾರತಕ್ಕೆ ಬಂದಿದ್ದು ತುಂಬಾನೇ ಕಡಿಮೆ.

ಈಗ ಪ್ರಿಯಾಂಕಾ ಚೋಪ್ರಾ ಅವರು ಮೂರು ವರ್ಷಗಳ ಬಳಿಕ ಮುಂಬೈಗೆ ಬರುತ್ತಿದ್ದಾರೆ. ಈ ಖುಷಿಯ ವಿಚಾರವನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಭಾರತಕ್ಕೆ ಬರುತ್ತಿರುವುದು ಏಕೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಪ್ರಿಯಾಂಕಾ ಚೋಪ್ರಾ ಅವರು 2018ರಲ್ಲಿ ನಿಕ್ ಅವರನ್ನು ವರಿಸಿದರು. ವಿವಾಹ ಆದ ಬಳಿಕ ಕೆಲವೇ ಕೆಲವು ಬಾರಿ ಭಾರತಕ್ಕೆ ಆಗಮಿಸಿದ್ದಾರೆ. ಈ ಮಧ್ಯೆ ಕೊವಿಡ್ ಕಾಣಿಸಿಕೊಂಡಿದ್ದರಿಂದ ಅವರು ಅಮೆರಿಕದಲ್ಲೇ ಇರಬೇಕಾಯಿತು.

ಪ್ರಿಯಾಂಕಾ ಹಾಗೂ ನಿಕ್ ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ಈ ಮಗುವಿಗೆ ಅವರು ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ನಾಮಕರಣ ಮಾಡಿದ್ದಾರೆ. ಮಗು ಜನಿಸಿದ ಬಳಿಕ ಭಾರತಕ್ಕೆ ಅವರು ಮೊದಲ ಬಾರಿ ಬರುತ್ತಿದ್ದಾರೆ.

ಇದೊಂದು ಸಾಮಾನ್ಯ ಭೇಟಿ ಎಂಬುದು ಮೂಲಗಳ ಮಾಹಿತಿ. ಪ್ರಿಯಾಂಕಾ ಚೋಪ್ರಾ ಅವರು ಯಾವುದಾದರೂ ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆಯೇ ಎಂಬ ಅನುಮಾವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.