
ನಟಿ ಪ್ರಿಯಾಂಕಾ ಉಪೇಂದ್ರ ಅವರು ಎಲ್ಲ ಹಬ್ಬಗಳನ್ನು ಖುಷಿಯಿಂದ ಆಚರಿಸುತ್ತಾರೆ. ಈಗ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಜೊತೆ ಅವರು ಹೋಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಮನೆಗೆ ಬಂದ ಅತಿಥಿಗಳ ಜೊತೆ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ನಿರಂಜನ್ ಮುಂತಾದವರು ಖುಷಿ ಖುಷಿಯಿಂದ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಆ ಫೋಟೋಗಳು ವೈರಲ್ ಆಗಿವೆ.

‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ಪತ್ನಿ ಶಿಲ್ಪಾ ಜೊತೆ ಬಂದು ಹೋಳಿ ಹಬ್ಬದ ಸೆಲೆಬ್ರೇಷನ್ನಲ್ಲಿ ಭಾಗಿ ಆಗಿದ್ದಾರೆ. ಸಿನಿಮಾದ ಕೆಲಸಗಳ ಬ್ಯುಸಿ ನಡುವೆ ಬಿಡುವು ಮಾಡಿಕೊಂಡು ಹಬ್ಬ ಆಚರಿಸಿದ್ದಾರೆ.

ಉಪೇಂದ್ರ ಅವರ ಫ್ಯಾಮಿಲಿ ಫ್ರೆಂಡ್, ಬಹುಕಾಲದ ಸ್ನೇಹಿತ ಗುರು ಕಿರಣ್ ಕೂಡ ಫ್ಯಾಮಿಲಿ ಜೊತೆ ಬಂದು ಉಪ್ಪಿ ಮನೆಯಲ್ಲಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಬಣ್ಣದಲ್ಲಿ ಅವರು ಮಿಂದೆದ್ದಿದ್ದಾರೆ.

ಅನು ಪ್ರಭಾಕರ್, ರಘು ಮುಖರ್ಜಿ, ಸೌಂದರ್ಯ ಜಗದೀಶ್ ಸೇರಿದಂತೆ ಅನೇಕರು ಹೋಳಿ ಆಡಿದ್ದಾರೆ. ಉಪೇಂದ್ರ-ಪ್ರಿಯಾಂಕಾ ದಂಪತಿಯ ಜೊತೆ ಅವರೆಲ್ಲರೂ ಹಾಡಿ ಕುಣಿದು ಸಂಭ್ರಮಿಸಿದ್ದಾರೆ.

ನಟಿ ಅನುಷಾ ರೈ ಅವರು ಕೂಡ ಹೋಳಿ ಹಬ್ಬವನ್ನು ಸಂತಸದಿಂದ ಆಚರಿಸಿದ್ದಾರೆ. ಈ ಸಡಗರದಲ್ಲಿ ತೆಗೆದುಕೊಂಡು ಕಲರ್ಫುಲ್ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಉಪೇಂದ್ರ ಅವರು ‘ಯುಐ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಉಪೇಂದ್ರ ಅವರೇ ನಿರ್ದೇಶನ ಮಾಡುತ್ತಿರುವುದರಿಂದ ನಿರೀಕ್ಷೆ ಜೋರಾಗಿದೆ. ಕೆಲಸದ ನಡುವೆ ಹೋಳಿ ಹಬ್ಬಕ್ಕೆ ಉಪ್ಪಿ ಸಮಯ ನೀಡಿದ್ದಾರೆ.