Kannada News Photo gallery Radhika Pandit shares special pics with Yash on 8th wedding anniversary Entertainment news in Kannada
ಗಂಡ-ಹೆಂಡತಿ ಬಾಂಧವ್ಯದ ಗುಟ್ಟು ತಿಳಿಸಿದ ರಾಧಿಕಾ ಪಂಡಿತ್; ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ
ಪರಸ್ಪರ ಪ್ರೀತಿಸಿ ಮದುವೆ ಆದ ರಾಧಿಕಾ ಪಂಡಿತ್ ಮತ್ತು ಯಶ್ ಅವರು ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ. ಚಿತ್ರರಂಗದಲ್ಲಿ ಸಾಧನೆ ಮಾಡುತ್ತಲೇ ತಮ್ಮ ಪ್ರೀತಿಯನ್ನು ಅವರು ಪಡೆದುಕೊಂಡರು. ಇಂದು (ಡಿಸೆಂಬರ್ 9) ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಗೆ 8ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ. ಆ ಪ್ರಯುಕ್ತ ಕೆಲವು ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
1 / 5
ರಾಧಿಕಾ ಪಂಡಿತ್ ಮತ್ತು ಯಶ್ ಅವರಿಗೆ ಅಭಿಮಾನಿಗಳು 8ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಅವರು ವಿಶೇಷ ಫೋಟೋಗಳ ಮೂಲಕ ಪತಿಗೆ ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ಎಂದಿದ್ದಾರೆ.
2 / 5
ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕಳೆದ 8 ವರ್ಷಗಳಿಂದ ಯಾವುದೇ ಮನಸ್ತಾಪ ಇಲ್ಲದೇ ಸಂಸಾರ ನಡೆಸುತ್ತಿದ್ದಾರೆ. ತಮ್ಮ ಅನ್ಯೋನ್ಯ ಸಂಸಾರದ ಬಗ್ಗೆ ಒಂದು ವಿಶೇಷ ಮಾತನ್ನು ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
3 / 5
‘ಇಬ್ಬರು ಪರ್ಫೆಕ್ಟ್ ವ್ಯಕ್ತಿಗಳು ಒಂದಾದಾಗ ಶ್ರೇಷ್ಠ ದಾಂಪತ್ಯ ಆಗುವುದಿಲ್ಲ. ವೈರುಧ್ಯಗಳಿರುವ ಇಬ್ಬರು ಪರಸ್ಪರರನ್ನು ಬಿಟ್ಟುಕೊಡದೇ ಇದ್ದಾಗ ದಾಂಪತ್ಯ ಶ್ರೇಷ್ಠವಾಗುತ್ತದೆ’ ಎಂದು ರಾಧಿಕಾ ಪಂಡಿತ್ ಅವರು ಈ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ. ಇದು ವೈರಲ್ ಆಗಿದೆ.
4 / 5
ಮದುವೆ ಬಳಿಕ ರಾಧಿಕಾ ಪಂಡಿತ್ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಯಿತು. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದರು. ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಈಗ ಮಕ್ಕಳ ಆರೈಕೆಯಲ್ಲಿ ರಾಧಿಕಾ ಪಂಡಿತ್ ಅವರು ಬ್ಯುಸಿ ಆಗಿದ್ದಾರೆ.
5 / 5
ಯಶ್ ಅವರು ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳ ಯಶಸ್ಸಿನ ನಂತರ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಅವರ ವೃತ್ತಿಜೀವನಕ್ಕೆ ರಾಧಿಕಾ ಪಂಡಿತ್ ಅವರು ಬೆಂಬಲವಾಗಿ ನಿಂತಿದ್ದಾರೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ನಟಿಸುತ್ತಿದ್ದಾರೆ.