Sign In

By signing in or creating an account, you agree with Associated Broadcasting Company's Terms & Conditions and Privacy Policy.

Raichur News: ಕಾರ್ಪೊರೇಟ್ ಶಾಲೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆ; ಹೇಗಿದೆ ನೋಡಿ

ಸರ್ಕಾರಿ ಶಾಲೆ ಅಂದ್ರೆ ಸಾಕು ಜನ ಮೂಗು ಮುರಿತಾರೆ. ಈಗ ಮಕ್ಕಳನ್ನ ಒಳ್ಳೆ ಹೈ ಪೈ ಕಾರ್ಪೊರೇಟ್ ಶಾಲೆಗಳಿಗೆ ಸೇರಿಸೋದು ಟ್ರೆಂಡ್ ಆಗಿದೆ. ಆದ್ರೆ, ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆ ಅನ್ನೊ ಹಣೆಪಟ್ಟಿ ಕಟ್ಟಿಕೊಂಡಿರೊ ಆ ಜಿಲ್ಲೆಯಲ್ಲೀಗ ಕಾರ್ಪೊರೇಟ್​ ಶಾಲೆಗಳ ರೀತಿ ಸರ್ಕಾರ ಶಾಲೆಗಳನ್ನ ಅಭಿವೃದ್ಧಿ ಪಡಿಸಲಾಗುತ್ತಿದೆ.

ಕಿರಣ್ ಹನುಮಂತ್​ ಮಾದಾರ್
|

Updated on: May 31, 2023 | 3:14 PM

ಕೈಯಲ್ಲಿ ಸಲಾಕೆ ಹಿಡಿದು ಸಸಿ ಆರೈಕೆ, ನೀರು ಹಾಕೋದನ್ನ ಖುದ್ದು ವಿದ್ಯಾರ್ಥಿಗಳೇ ಮಾಡುತ್ತಿರುವುದು. ಇದರ ಜೊತೆಗೆ ಆಟ-ಪಾಠಗಳಲ್ಲೂ ಮುಂದಿರೊ ಮಕ್ಕಳು. ಹೀಗೆ ಸರ್ಕಾರಿ ಶಾಲೆಯನ್ನ ಅಭಿವೃದ್ಧಿ ಪಡಿಸೋದರ ಜೊತೆಗೆ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿರೋ ಶಿಕ್ಷಕರು. ಅಷ್ಟಕ್ಕೂ ಇಂಥಹ ಮಾದರಿ ಶಾಲೆ ಇರೋದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ನಾಗಡದಿನ್ನಿ ಗ್ರಾಮದಲ್ಲಿ.

1 / 7
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಭಾಗಗಳ ಜನರಿಗೆ ವರದಾನವಾಗಿರೊದಲ್ಲಿ ಎರಡು ಮಾತಿಲ್ಲ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಗುಳೆ ಹೋಗುವವರೇ ಹೆಚ್ಚಾದ್ದರಿಂದ ನರೇಗಾ(NREG) ಅದೆಷ್ಟೋ ಅನುಕೂಲ ಮಾಡಿಕೊಟ್ಟಿದೆ. ಪ್ರಮುಖವಾಗಿ ಜಿಲ್ಲೆ ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮ ಪಂಚಾಯತಿ ನರೇಗಾದಡಿ ಸರ್ಕಾರಿ ಶಾಲೆಯನ್ನ ಅತ್ಯದ್ಭುತವಾಗಿ ಅಭಿವೃದ್ಧಿ ಪಡಿಸಲಾಗಿದೆ.

2 / 7
ಸದ್ಯ ಜಿಲ್ಲೆಯಲ್ಲಿ ಮಾದರಿ ಶಾಲೆ ಅನ್ನೊ ಹೆಗ್ಗಳಿಕೆ ಪಡೆದಿರುವ ಇಲ್ಲಿ, ಸುಸಜ್ಜಿತ ಭೋಜನಾಲಯ, ಅಡುಗೆ ಕೋಣೆ ಹಾಗೂ ರಾಜ್ಯ ಮಟ್ಟದ ಗ್ರೌಂಡ್​ಗಳಂತಿರುವ ವಾಲಿಬಾಲ್, ಥ್ರೋ ಬಾಲ್, ಕಬಡ್ಡಿ, ಖೋಖೋ ಬಾಸ್ಕೆಟ್ ಬಾಲ್ ಮೈದಾನಗಳು ಗಮನ ಸೆಳೆಯುವಂತಿವೆ.

3 / 7
ಅಷ್ಟೇ ಅಲ್ಲ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಸುತ್ತಲೂ ನೂರಾರು ಗಿಡಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿ ಶಾಲೆಯಾಗಿ ಕಂಗೊಳಿಸುವಂತೆ ಮಾಡಲಾಗಿದೆ.‌ ನರೇಗಾ ಯೋಜನೆಯ ಲಾಭ ಪಡೆಯುತ್ತಿರೋ ಜಿಲ್ಲೆಗಳ ಪೈಕಿ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆ ಮೊದಲ ಹೆಜ್ಜೆ ಇಟ್ಟಿದೆ.

4 / 7
ರಾಯಚೂರು ಜಿಲ್ಲಾ ಪಂಚಾಯತಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ 123 ಹೈಟೆಕ್ ಭೋಜನಾಲಯ, 66 ಅಡುಗೆ ಕೋಣೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ‌. ಈ‌ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಸುಸಜ್ಜಿತ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಪ್ರಾಥಮಿಕ ಹಂತವಾಗಿ ಅಭಿವೃದ್ಧಿ ಪಡಿಸಲಾದ ನಾಗಡದಿನ್ನಿ ಗ್ರಾಮದ ಸರ್ಕಾರಿ ಶಾಲೆ ಈಗ ಜಿಲ್ಲೆಗೆ ಮಾದರಿಯಾಗಿದೆ.

5 / 7
ಇದೇ ನಿಟ್ಟಿನಲ್ಲಿ ಈಗ ಜಿಲ್ಲೆಯ ಒಟ್ಟು 499 ಪ್ರೌಢ ಶಾಲೆಗಳನ್ನು ನರೇಗಾದಡಿಯೇ ಅಭಿವೃದ್ಧಿ ಮಾಡಲಾಗುತ್ತಿದೆ. ಇಲ್ಲಿ ನರೇಗಾದಡಿ ಶಾಲೆಗಳು ಅಭಿವೃದ್ಧಿಯಾಗುತ್ತಿರುವುದರಿಂದ, ಗ್ರಾಮೀಣ ಭಾಗದ ಕಾರ್ಮಿಕರಿಗೂ ಹೆಚ್ಚುವರಿ ಕೆಲಸ ಸಿಕ್ಕಿದೆ. ಇಂಥಹ ವಿನೂತನ ಯೋಜನೆಗೆ ಮುಂದಾಗಿರುವ ರಾಯಚೂರು ಜಿಲ್ಲಾಡಳಿತದ ಕಾರ್ಯ ಮೆಚ್ಚುವಂಥದ್ದು.

6 / 7
ಅಷ್ಟೇ ಅಲ್ಲ ಇದೇ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಪಡಿಸಿದ್ರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಸೇರಿಸೋ ಟ್ರೆಂಡ್ ಕೂಡ ಮುಂಬರೋ ದಿನಗಳಲ್ಲಿ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

7 / 7
Follow us
ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ ನೋಡಿ
ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ ನೋಡಿ
ಚಿತ್ರರಂಗ ಕೇಳಿದ್ದನ್ನೆಲ್ಲ ಬಜೆಟ್​ನಲ್ಲಿ ಕೊಟ್ಟಿದ್ದಾರೆ: ಸಾಧು ಕೋಕಿಲ

ಎತ್ತಿನಹೊಳೆ ಯೋಜನೆ ಚರ್ಚಿಸಲು 18ರಂದು ದೆಹಲಿ ಹೋಗುತ್ತೇನೆ: ಶಿವಕುಮಾರ್

ಹಲಾಲ್ ಬಜೆಟ್ ಅಂದವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಮಲ್ಟಿಪ್ಲೆಕ್ಸ್​ ಟಿಕೆಟ್ ದರದ ಮೇಲೆ ನಿಯಂತ್ರಣ, ಫಿಲ್ಮ್ ಚೇಂಬರ್ ಸಂತಸ

ಗ್ರೇಟರ್ ಬೆಂಗಳೂರು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ: ಶಿವಕುಮಾರ್

ರೈತರಿಗೆ ₹10,000 ಕೋಟಿ ಮೀಸಲಿಟ್ಟರೆ ಯಾವ ಮೂಲೆಗಾದೀತು? ಮೈಸೂರು ರೈತರು

ಬಜೆಟ್​ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಇಲ್ಲಿದೆ ನೇರ ಪ್ರಸಾರ

ಮುಸಲ್ಮಾನರಿಗೆ ಮೀಸಲಾತಿ ನೀಡಿದ್ದನ್ನು ಕೋರ್ಟಲ್ಲಿ ಪ್ರಶ್ನಿಸುತ್ತೇವೆ: ಶಾಸಕ

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದು ಶ್ಲಾಘನೀಯ: ಹೆಬ್ಬಾರ್