- Kannada News Photo gallery Raiders enter Hyderabad and many other Cities to Reveal Kalki 2898 AD Movie
ಪ್ರಮುಖ ನಗರಗಳ ಮಾಲ್ನಲ್ಲಿ ರೈಡರ್ಸ್; ಏನಿದು ಅಪ್ಡೇಟ್?
ರೈಡರ್ಗಳು ‘ಕಲ್ಕಿ 2898 ಎಡಿ’ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ. ಹಲವು ಪ್ರಮುಖ ನರಗಳಲ್ಲಿ ಈ ವಿಚಿತ್ರ ಜೀವಿಗಳನ್ನು ನೋಡಿ ಜನರಿಗೆ ಅಚ್ಚರಿ ಆಗಿದೆ. ಕೆಲವರು ಭಯ ಬಿದ್ದಿದ್ದಾರೆ.
Updated on:Jan 12, 2024 | 3:50 PM

ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ, ಮದುರೈ ಸೇರಿ ಮೊದಲಾದ ಪ್ರಮುಖ ನಗರಗಳಲ್ಲಿ ರೈಡರ್ಸ್ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೂ ಒಂದು ಕಾರಣ ಇದೆ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ತಿಳಿಸಲಾಗಿದೆ. ಸಿನಿಮಾದಲ್ಲಿ ಬರುವ ಚಿತ್ರ ವಿಚಿತ್ರ ಪಾತ್ರಧಾರಿಗಳಿಂದಲೇ ರಿಲೀಸ್ ದಿನಾಂಕ ತಿಳಿಸಲಾಗಿದೆ.

ರೈಡರ್ಗಳು ‘ಕಲ್ಕಿ 2898 ಎಡಿ’ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ. ಹಲವು ಪ್ರಮುಖ ನರಗಳಲ್ಲಿ ಈ ವಿಚಿತ್ರ ಜೀವಿಗಳನ್ನು ನೋಡಿ ಜನರಿಗೆ ಅಚ್ಚರಿ ಆಗಿದೆ. ಕೆಲವರು ಭಯ ಬಿದ್ದಿದ್ದಾರೆ.

ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಲಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಚಿತ್ರದಿಂದ ಪ್ರಭಾಸ್ ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ರಿಲೀಸ್ಗೆ ಇನ್ನು ನಾಲ್ಕು ತಿಂಗಳು ಸಮಯ ಇದೆ. ಈ ಅವಧಿಯಲ್ಲಿ ಭರ್ಜರಿಯಾಗಿ ಚಿತ್ರಕ್ಕೆ ಪ್ರಚಾರ ನೀಡಲು ತಂಡ ಮುಂದಾಗಿದೆ. ಇದರ ಭಾಗವಾಗಿ ಈಗ ಪೋಸ್ಟರ್ನ ಭಿನ್ನವಾಗಿ ರಿಲೀಸ್ ಮಾಡಲಾಗಿದೆ.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ. ಪ್ರಭಾಸ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ.
Published On - 2:41 pm, Fri, 12 January 24




