ಟೋಬಿ ಸಿನಿಮಾದ ಟ್ರೈಲರ್ ಅನ್ನು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅವರುಗಳು ಬಿಡುಗಡೆ ಮಾಡಿದ್ದಾರೆ.
'ಟೋಬಿ' ಸಿನಿಮಾದ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದುಕೊಂಡಿದ್ದಾರೆ. ನಿರ್ದೇಶನ ಮಾಡಿರುವುದು ಅವರದ್ದೇ ತಂಡದ ಬಾಸಿಲ್.
'ಟೋಬಿ' ಸಿನಿಮಾದಲ್ಲಿ ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು ಹಾಗೂ ಗೋಪಾಲ್ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಇನ್ನಿತರರು ನಟಿಸಿದ್ದಾರೆ.
'ಟೋಬಿ' ಸಿನಿಮಾದ ಕತೆಯನ್ನು ಕಥೆಗಾರ ಟಿಕೆ ದಾಯನಂದ ಬರೆದಿದ್ದಾರೆ. ಈ ಕತೆ ನಿಜವಾದ ವ್ಯಕ್ತಿಯೊಬ್ಬನ ಜೀವನವನ್ನು ಆಧರಿಸಿದ್ದಾಗಿದೆ.
'ಟೋಬಿ' ಸಿನಿಮಾವು ಆಗಸ್ಟ್ 25ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.
'ಟೋಬಿ' ಸಿನಿಮಾದಲ್ಲಿ ಅಮಾಯಕ ಆದರೆ ಅಷ್ಟೆ ಹಿಂಸಾತ್ಮಕ ಪ್ರವೃತ್ತಿಯ ವ್ಯಕ್ತಿಯಾಗಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
'ಟೋಬಿ' ಸಿನಿಮಾವನ್ನು ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಫಿಲಮ್ಸ್, ಅಗಸ್ತ್ಯ ಫಿಲಮ್ಸ್, ಕಾಫಿ ಗ್ಯಾಂಗ್, ಸ್ಮೂತ್ ಸೇಯ್ಲರ್ಸ್ ಒಟ್ಟಾಗಿ ನಿರ್ಮಾಣ ಮಾಡಿದೆ.
ರಾಜ್ ಬಿ ಶೆಟ್ಟಿ ನಟಿಸಿರುವ 'ಟೋಬಿ' ಸಿನಿಮಾದ ಟ್ರೈಲರ್ ಆಗಸ್ಟ್ 4ರಂದು ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ.
Published On - 5:37 pm, Sat, 5 August 23