Rajiv Gandhi Photos: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಪರೂಪದ ಚಿತ್ರಗಳು

Rajiv Gandhi: ಮಾಜಿ ಪ್ರಧಾನಿ ರಾಜೀವ್ ಗಾಂಧಿ1991ರ ಇದೇ ದಿನ ಎಲ್​ಟಿಟಿಇ ಸಂಘಟನೆಯ ಸದಸ್ಯರು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿ ಇನ್ನಿಲ್ಲ ಎಂಬ ಸುದ್ದಿಯನ್ನು ಭಾರತೀಯರು ಅರಗಿಸಿಕೊಳ್ಳಲು ನಿಜಕ್ಕೂ ಕಷ್ಟಪಟ್ಟರು. ಅವರ ಸ್ಮರಣೆಗಾಗಿ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಜೀವನದ ಪ್ರಮುಖ ಘಟ್ಟಗಳ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ. (ಚಿತ್ರಕೃಪೆ: ಎಪಿಎಫ್)

guruganesh bhat
| Updated By: Digi Tech Desk

Updated on:May 21, 2021 | 9:31 AM

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಶ್ರೀಲಂಕಾದ ಎಲ್​ಟಿಟಿಇ ಉಗ್ರರ ಮಾನವ ಬಾಂಬ್ ದಾಳಿಯಿಂದ ಮೃತಪಟ್ಟು ಇಂದಿಗೆ 30 ವರ್ಷ. ರಾಜೀವ್ ಗಾಂಧಿ ಪುಣ್ಯತಿಥಿಯ ಸ್ಮರಾಣಾರ್ಥ ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಾಳೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Rajiv Gandhi Death Anniversary 2021 know about former PM of India rare photos and details in Kannada

1 / 9
ರಾಜೀವ್ ಗಾಂಧಿಯವರ ಸ್ಮರಣಾರ್ಥ ಕಾಂಗ್ರೆಸ್​ನ ವಿಧಾನಸಭಾ ಮತ್ತು ವಿಧಾನಪರಿಷತ್ ಸದಸ್ಯರಿಗೆ ತಮ್ಮ ಕ್ಷೇತ್ರಕ್ಕೆ ಕನಿಷ್ಠ ಎರಡು ಆ್ಯಂಬುಲೆನ್ಸ್​ಗಳನ್ನು ಕೊಡುಗೆ ನೀಡಲು ಕೆ.ಸಿ.ವೇಣುಗೋಪಾಲ್ ಕರೆ ನೀಡಿದ್ದಾರೆ. ಅಲ್ಲದೇ, ರಾಜ್ಯ ಮತ್ತು ಜಿಲ್ಲಾಮಟ್ಟಗಳಲ್ಲಿ ಸಾಮೂಹಿಕ ಮಾಸ್ಕ್ ವಿತರಣೆ ಮಾಡಲು ಅವರು ಸೂಚನೆ ನೀಡಿದ್ದಾರೆ.

Rajiv Gandhi Death Anniversary 2021 know about former PM of India rare photos and details in Kannada

2 / 9
ರಾಜೀವ್ ಗಾಂಧಿ ಇಟಲಿಯಲ್ಲಿದ್ದಾಗ ಸೋನಿಯಾ ಅವರ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಲು ಹೆಚ್ಚು ಕಾಲ ತಾಗಲಿಲ್ಲ. 1968ರಲ್ಲಿ, ಮೂರು ವರ್ಷಗಳ ಪ್ರೇಮದ ನಂತರ ರಾಜೀವ್ ಗಾಂಧಿ ಎಟ್ವಿಗೆ ಆಂಟೋನಿಯಾ ಅಲ್ಬಿನಾ ಮಿನೊ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರೇ ಇಂದಿನ ಸೋನಿಯಾ ಗಾಂಧಿ! ಈ ದಂಪತಿಗೆ ಹುಟ್ಟಿದ ಪ್ರಥಮ ಪುತ್ರನೇ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ.

3 / 9
ತಾಯಿ, ದಿವಂಗತ ಇಂದಿರಾ ಗಾಂಧಿ ತಮ್ಮ ಅಂಗರಕ್ಷಕರ ಗುಂಡಿಗೇ ಆಹುತಿಯಾದ ನಂತರ ದೇಶದ ರಾಜಕೀಯದಲ್ಲಿ ದೇಶದ ಸಾರ್ಥ್ಯ ವಹಿಸುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಒಮ್ಮೆಲೆ ಸಾರ್ವತ್ರಿಕ ಚುನಾವಣೆ ಎದುರಾಯಿತು. ಕಾಂಗ್ರೆಸ್ ರಾಜೀವ್ ಗಾಂಧಿಯವರ ನಾಯಕತ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದು ಅಭೂತಪೂರ್ವ ವಿಜಯ ಸಾಧಿಸಿತು.

4 / 9
1981ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ರಾಜೀವ್ ಗಾಂಧಿಯವರನ್ನು ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಮೊದಲ ಚುನಾವಣೆಯಲ್ಲೇ ತಮ್ಮ ಎದುರಾಳಿಯಾಗಿದ್ದ ಶರದ್ ಯಾದವ್ ಅವರನ್ನು 2,37,000 ಮತಗಳಿಂದ ಸೋಲಿಸಿ ಅಭೂತಪೂರ್ವ ವಿಜಯ ದಾಖಲಿಸಿದ್ದರು ರಾಜೀವ್ ಗಾಂಧಿ. ಮುಂದೆ ಕಾಂಗ್ರೆಸ್​ನ ರಾಷ್ಟ್ಟೀಯ ಕಾರ್ಯದರ್ಶಿಯೂ ಆಗಿ ಅಧಿಕಾರ ವಹಿಸಿಕೊಂಡ ಅವರಿಗೆ 1982ರಲ್ಲಿ ಏಷ್ಯನ್ ಗೇಮ್ಸ್​ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವ ಹೊಣೆಗಾರಿಕೆಯೂ ಒದಗಿಬಂತು.

5 / 9
ಕಾಂಗ್ರೆಸ್ ರಾಜೀವ್ ಗಾಂಧಿಯವರ ನಾಯಕತ್ವದಲ್ಲಿ ಅಂದಿನ 508 ಲೋಕಸಭಾ ಕ್ಷೇತ್ರಗಳಲ್ಲಿ 401 ಕ್ಷೇತ್ರಗಳನ್ನು ಮೊಗೆದು ಬಾಚಿಕೊಂಡಿತು. 1984ರಲ್ಲಿ ಇಂದಿರಾ ಗಾಂಧಿಯವರ ಮಗ ರಾಜೀವ್ ಗಾಂಧಿ ಪ್ರಧಾನಿಯಾದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಜೀವ್ ಗಾಂಧಿಯವರ ಸಂಪುಟದಲ್ಲಿ ಸಚಿವರಾಗಿದ್ದರು ಎಂಬುದು ಉಲ್ಲೇಖನೀಯ.

6 / 9
ವಿಶ್ವಮಟ್ಟದಲ್ಲಿ ಭಾರತವನ್ನು ಮೊದಲ ಪಂಕ್ತಿಯ ನಾಯನನ್ನಾಗಿ ತಯಾರಿಸುವ ಹುಕಿ ಅವರಲ್ಲಿತ್ತು ಎನ್ನುತ್ತಾರೆ ಹಲವು ರಾಜಕೀಯ ಇತಿಹಾಸಕಾರರು. ಇಂದಿನ ಆತ್ಮನಿರ್ಭರ ಭಾರತ ಅರ್ಥಾತ್ ಭಾರತದಲ್ಲೇ ತಯಾರಿಸುವ ಯೋಜನೆಯನ್ನೂ ರಾಜೀವ್ ಗಾಂಧಿ ಕನಸು ಕಂಡಿದ್ದರು. ಆದರೆ ಬೋಫೋರ್ಸ್ ಹಗರಣ ಅವರ ರಾಜಕೀಯ ಜೀವನಕ್ಕೆ ಒಂದು ಕಪ್ಪುಚುಕ್ಕಿಯಾಗಿತ್ತು.

7 / 9
ರಾಜೀವ್ ಗಾಂಧಿ ದೇಶ ಕಂಡ ಅತ್ಯಂತ ಕಿರಿಯ ಪ್ರಧಾನಿ. ತಮ್ಮ 40ನೇ ವಯಸ್ಸಿನಲ್ಲೇ ಪ್ರಧಾನಿ ಪಟ್ಟ ಏರಿದ್ದ ಅವರದ್ದು ಮಹತ್ವಾಕಾಂಕ್ಷೆಯ ವ್ಯಕ್ತಿತ್ವ. ರಾಜೀವ್ ಗಾಂಧಿ ಕೇವಲ ರಾಜಕಾರಣಿಯೊಂದೇ ಆಗಿರಲಿಲ್ಲ. ಅವರದ್ದು ಅತ್ಯಂತ ವೈವಿಧ್ಯಮಯ ವ್ಯಕ್ತಿತ್ವ. ದೇಶದ 6ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರೊಳಗೊಬ್ಬ ವಿಮಾನಯಾನ ಪಟು ಇದ್ದ. ಚಿತ್ರ ಕಲಾವಿದನಿದ್ದ, ಸಂಗೀತ ಉಪಾಸಕನಿದ್ದ ಎಂಬುದು ಈ ತಲೆಮಾರಿನವರಿಗೆ ತಿಳಿಯದ ವಿಚಾರ.

8 / 9
ಮಾಜಿ ಪ್ರಧಾನಿ ರಾಜೀವ್ ಗಾಂಧಿ1991ರ ಇದೇ ದಿನ ಎಲ್​ಟಿಟಿಇ ಸಂಘಟನೆಯ ಸದಸ್ಯರು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿ ಇನ್ನಿಲ್ಲ ಎಂಬ ಸುದ್ದಿಯನ್ನು ಭಾರತೀಯರು ಅರಗಿಸಿಕೊಳ್ಳಲು ನಿಜಕ್ಕೂ ಕಷ್ಟಪಟ್ಟರು. ಅವರ ಸ್ಮರಣೆಗಾಗಿ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.

9 / 9

Published On - 8:54 am, Fri, 21 May 21

Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್