ಪತ್ನಿ ಉಪಾಸನಾ ಹಾಗೂ ಮಗಳು ಕ್ಲಿನ್ಕಾರಾ ಜೊತೆ ರಾಮ್ ಚರಣ್ ವಿದೇಶಕ್ಕೆ ತೆರಳಿದ್ದಾರೆ. ಅವರು ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಈ ಫೋಟೋನ ಹಂಚಿಕೊಳ್ಳುತ್ತಿದ್ದಾರೆ.
ಉಪಾಸನಾ ಅವರು ಮಗಳನ್ನು ಎತ್ತಿಕೊಂಡಿದ್ದರು. ರಾಮ್ ಚರಣ್ ಅವರು ಪ್ರೀತಿಯ ಶ್ವಾನವನ್ನು ಹಿಡಿದು ಬಂದಿದ್ದಾರೆ. ಅವರ ಸ್ಮೈಲ್ ಎಲ್ಲರ ಗಮನ ಸೆಳೆದಿದೆ. ಈ ದಂಪತಿ ಇಟಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಮಗಳು ಜನಿಸಿದ ಬಳಿಕ ಇದು ಮೊದಲ ಟ್ರಿಪ್.
ರಾಮ್ ಚರಣ್ ಅವರು ಪಕ್ಕಾ ಫ್ಯಾಮಿಲಿಮ್ಯಾನ್. ಅವರು ಸಮಯ ಸಿಕ್ಕಾಗಲೆಲ್ಲ ವಿದೇಶಕ್ಕೆ ತೆರಳುತ್ತಲೇ ಇರುತ್ತಾರೆ. ‘ಗೇಮ್ ಚೇಂಜರ್’ ಸಿನಿಮಾದ ಕೆಲಸ ಪೂರ್ಣಗೊಳಿಸಿ ಅವರು ಇಟಲಿಗೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
‘ಗೇಮ್ ಚೇಂಜರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ರಿಲೀಸ್ಗಾಗಿ ಅಭಿಮಾನಿಗಳು ಕಾದಿದ್ದಾರೆ. ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ ಅವರು ರಾಮ್ ಚರಣ್ಗೆ ಜೊತೆಯಾಗಿದ್ದಾರೆ.
ರಾಮ್ ಚರಣ್ ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆಯಿತು. ರಾಮ್ ಚರಣ್ ಪಾತ್ರ ಜನರಿಗೆ ಇಷ್ಟವಾಗಿದೆ. ಈ ಸಿನಿಮಾದ ಹಾಡು ಆಸ್ಕರ್ ಕೂಡ ಗೆದ್ದಿದೆ. ಹೀಗಾಗಿ ರಾಮ್ ಚರಣ್ಗೆ ಹೊಸ ಹುಮ್ಮಸ್ಸು ಸಿಕ್ಕಿದೆ.