- Kannada News Photo gallery Ram Charan wife Upasana Konidela baby shower attended by Allu Arjun Sania Mirza and others
Upasana Konidela: ರಾಮ್ ಚರಣ್ ಪತ್ನಿ ಉಪಾಸನಾ ಅದ್ದೂರಿ ಸೀಮಂತ ಸಂಭ್ರಮ; ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಭಾಗಿ
Upasana Konidela Baby Shower Photos: ಹೈದರಾಬಾದ್ನಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರ ಸೀಮಂತ ಕಾರ್ಯಕ್ರಮ ನೆರವೇರಿದೆ. ಆಪ್ತರ ಸಮ್ಮುಖದಲ್ಲಿ ನಡೆದ ಈ ಸಮಾರಂಭದ ಫೋಟೋಗಳು ಇಲ್ಲಿವೆ.
Updated on:Apr 24, 2023 | 8:28 PM

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲೀಗ ಸಂತಸ ಮನೆ ಮಾಡಿದೆ. ಮದುವೆಯಾಗಿ ಬರೋಬ್ಬರಿ 10 ವರ್ಷದ ಬಳಿಕ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೆಲಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

3 ವಾರದ ಹಿಂದಷ್ಟೇ ದುಬೈನಲ್ಲಿ ಅದ್ದೂರಿಯಾಗಿ ಉಪಾಸನಾ ಕೊನಿಡೆಲಾ ಅವರ ಸೀಮಂತ ಕಾರ್ಯಕ್ರಮ ನೆರವೇರಿಸಲಾಗಿತ್ತು. ಅದರ ಬೆನ್ನಲ್ಲೇ ಹೈದರಾಬಾದ್ನ ರಾಮ್ ಚರಣ್ ನಿವಾಸದಲ್ಲಿ ಮತ್ತೊಮ್ಮೆ ಸೀಮಂತ ಕಾರ್ಯಕ್ರಮ ನಡೆದಿದೆ.

ಆಪ್ತರ ಸಮ್ಮುಖದಲ್ಲಿ ನಡೆದ ಬೇಬಿಶಾವರ್ ಕಾರ್ಯಕ್ರಮದಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಅವರು ಸುಂದರವಾಗಿ ಕಂಗೊಳಿಸಿದ್ದಾರೆ. ಈ ಪಾರ್ಟಿಯಲ್ಲಿ ಪಿಂಕಿ ರೆಡ್ಡಿ, ಸಾನಿಯಾ ಮಿರ್ಜಾ, ಕನಿಕಾ ಕಪೂರ್ ಮುಂತಾದವರು ಹಾಜರಿದ್ದರು.

ಚಿರಂಜೀವಿ ಮತ್ತು ಸುರೇಖಾ ಕೊನಿಡೇಲ, ಸಹೋದರಿಯರಾದ ಸುಶ್ಮಿತಾ ಮತ್ತು ಶ್ರೀಜಾ, ಉಪಾಸನಾ ಅವರ ತಾಯಿ ಶೋಬನಾ ಕಾಮಿನೇನಿ, ಸಂಗೀತಾ ರೆಡ್ಡಿ, ಅಲ್ಲು ಅರ್ಜುನ್ ಸೇರಿದಂತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ಅವರು ಮದುವೆ ಆಗಿದ್ದು 2012ರ ಜೂನ್ 14ರಂದು. ವೈವಾಹಿಕ ಜೀವನಕ್ಕೆ ಕಾಲಿಟ್ಟು 10 ವರ್ಷಗಳ ಬಳಿಕ ಅವರು ಮೊದಲ ಮಗು ಪಡೆಯಲು ನಿರ್ಧರಿಸಿದರು. ಸದ್ಯದಲ್ಲೇ ಅವರ ಕುಟುಂಬದಿಂದ ಗುಡ್ ನ್ಯೂಸ್ ಸಿಗಲಿದೆ.
Published On - 8:28 pm, Mon, 24 April 23




