
ನಟಿ ರಂಜನಿ ರಾಘವನ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಗಮನ ಸೆಳೆದವರು. ಅವರು ಹಿರಿತೆರೆಯಲ್ಲೂ ತೊಡಗಿಕೊಂಡಿದ್ದಾರೆ. ಈಗ ಅವರು ತಮ್ಮ ಬಾಳ ಸಂಗಾತಿಯನ್ನು ಪರಿಚಯಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಸ್ವತಃ ಅವರೇ ಈ ಫೋಟೋ ಹಂಚಿಕೊಂಡಿದ್ದಾರೆ.

ರಂಜನಿ ಅವರ ಕೈ ಹಿಡಿಯುತ್ತಿರೋ ಹುಡುಗನ ಹೆಸರು ಸಾಗರ್ ಭಾರಧ್ವಜ್. ಅವರು ವೃತ್ತಿಯಲ್ಲಿ ಅಥ್ಲೆಟ್ ಎನ್ನಲಾಗಿದೆ. ರನ್ನರ್, ಸೈಕಲಿಸ್ಟ್, ಬೈಕರ್. ಅವರು ಇನ್ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಆಗಿ ಇಟ್ಟಿದ್ದಾರೆ.

ರಂಜನಿ ರಾಘವನ್ ಹಂಚಿಕೊಂಡ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.

ರಂಜನಿ ರಾಘವನ್ ಅವರು ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಇದ್ದರು. ‘ಕನ್ನಡತಿ’ ಧಾರಾವಾಹಿ ಮೂಲಕ ರಂಜನಿ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಅವರು ಈಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಕಾಂಗರೂ’ ಹೆಸರಿನ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ.

ವೈಯಕ್ತಿಕ ವಿಚಾರಗಳ ಬಗ್ಗೆ ರಂಜನಿ ಹೆಚ್ಚು ಮಾತನಾಡಿಲ್ಲ. ಅವರು ಇವುಗಳನ್ನು ಖಾಸಗಿಯಾಗಿ ಇಡಲು ಬಯಸುತ್ತಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ಜೀವನ ಸಂಗಾತಿ ಬಗ್ಗೆ ಮಾಹಿತಿ ನೀಡಿದ್ದಾರೆ.