ಬೆಂಗಳೂರು ಮೂಲಕ ಮೈಸೂರು ಸೆಂಗೊಟ್ಟೈ ಮಧ್ಯೆ 2 ವಿಶೇಷ ರೈಲು: ಸಮಯ, ನಿಲುಗಡೆ ವಿವರ ಇಲ್ಲಿದೆ

ಬೆಂಗಳೂರು, ಆಗಸ್ಟ್ 29: ನೈಋತ್ಯ ರೈಲ್ವೆಯು ಹಬ್ಬಗಳ ಸೀಸನ್​ನಲ್ಲಿ ಕರ್ನಾಟಕದ ಮತ್ತು ಇತರ ರಾಜ್ಯಗಳ ಮಧ್ಯೆ ಅನೇಕ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. ಈ ವರ್ಷವೂ ಹಲವು ವಿಶೇಷ ರೈಲುಗಳನ್ನು ಘೋಷಿಸಿದೆ. ಇದೀಗ ಮೈಸೂರು ಮತ್ತು ತಮಿಳುನಾಡಿನ ಸೆಂಗೊಟ್ಟೈ ಮಧ್ಯೆ ಬೆಂಗಳೂರು ಮಾರ್ಗವಾಗಿ 2 ವಿಶೇಷ ರೈಲುಗಳನ್ನು ಪ್ರಕಟಿಸಿದೆ. ಆ ಕುರಿತ ವಿವರ ಇಲ್ಲಿದೆ.

Ganapathi Sharma
|

Updated on: Aug 29, 2024 | 1:16 PM

ಹಬ್ಬಗಳ ಸೀಸನ್​ನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಸೆಪ್ಟೆಂಬರ್‌ನಲ್ಲಿ ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಮೈಸೂರು-ಸೆಂಗೊಟ್ಟೈ ಎಕ್ಸ್‌ಪ್ರೆಸ್ ವಿಶೇಷ ರೈಲು (06241) ಮೈಸೂರಿನಿಂದ ಸೆಪ್ಟೆಂಬರ್ 4 ಮತ್ತು 7 ರಂದು ರಾತ್ರಿ 9.20 ಕ್ಕೆ ಹೊರಟು ಮರುದಿನ ಸಂಜೆ 4.50 ಕ್ಕೆ ಸೆಂಗೊಟ್ಟೈ ತಲುಪಲಿದೆ.

1 / 5
ಸೆಂಗೊಟ್ಟೈ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06242) ಸೆಪ್ಟೆಂಬರ್ 5 ಮತ್ತು 8 ರಂದು ಸಂಜೆ 7.45 ಕ್ಕೆ ಸೆಂಗೊಟ್ಟೈನಿಂದ ಹೊರಟು ಮರುದಿನ ಮಧ್ಯಾಹ್ನ 2.20 ಕ್ಕೆ ಮೈಸೂರು ತಲುಪಲಿದೆ.

2 / 5
ಬೆಂಗಳೂರು ಮೂಲಕ ಹಾದುಹೋಗಲಿವೆ: ಎರಡೂ ವಿಶೇಷ ರೈಲುಗಳು ಕೆಎಸ್‌ಆರ್ ಬೆಂಗಳೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಕಾರೈಕ್ಕುಡಿ, ಮನನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ, ರಾಜಪಾಳ್ಯಂ ಮತ್ತು ತೆಂಕಶಿ ಮೂಲಕ ಹಾದುಹೋಗಲಿವೆ.

3 / 5
ಎರಡು ಎಸಿ 2 ಟೈರ್, ಎರಡು ಎಸಿ 3 ಟೈರ್, ಆರು ಸ್ಲೀಪರ್ ಕೋಚ್​, ಆರು ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಈ ವಿಶೇಷ ರೈಲುಗಳು ಒಳಗೊಂಡಿರಲಿವೆ.

4 / 5
ವಿಶೇಷ ರೈಲುಗಳಿಗೆ ಎಲ್ಲೆಲ್ಲಿ ನಿಲುಗಡೆ?: ಯೆಲಿಯೂರು, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕ್ಕುಡಿ, ಶಿವಗಂಗಾ, ಮನಮದುರೈ, ಅರಪ್ಪುಕ್ಕೋಟ್ಟೈ, ರಾಜಪಾಲಂ ಶ್ರೀನಗರ, ಅರಪ್ಪುಕ್ಕೊಟ್ಟೈ, ವಿರುದ್‌ಕೊಟ್ಟು, ಶಂಕರಕೋವಿಲ್, ಪಮಾಬ ಕೋವಿಲ್ ಶಾಂಡಿ, ಕಡಯನಲ್ಲೂರು ಮತ್ತು ತೆಂಕಶಿ ನಿಲ್ದಾಣಗಳಲ್ಲಿ ವಿಶೇಷ ರೈಲುಗಳಿಗೆ ನಿಲುಗಡೆ ಇದೆ.

5 / 5
Follow us