ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿ ಫೋಟೋಶೂಟ್

Updated on: May 29, 2025 | 9:53 AM

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ಪ್ರೀತಿ ಇದೆ ಎಂಬುದು ಬಹುತೇಕ ಖಚಿತವಾಗಿದೆ. ಇದಕ್ಕೆ ಸಾಕ್ಷಿಗಳು ಸಿಗುತ್ತಲೇ ಇರುತ್ತವೆ. ಈಗ ರಶ್ಮಿಕಾ ಮಂದಣ್ಣ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋನ ವಿಜಯ್ ದೇವರಕೊಂಡ ಅವರೇ ತೆಗೆದಿದ್ದು ಎಂದು ಹೇಳಲಾಗುತ್ತಿದೆ.

1 / 5
ರಶ್ಮಿಕಾ ಮಂದಣ್ಣ ಅವರಿಗೆ ಫೋಟೋಶೂಟ್ ಮಾಡಿಸೋದು ಎಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಅವರು ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾರೆ. ಈಗ ಅವರ ಹೊಸ ಫೋಟೋಶೂಟ್ ಸಾಕಷ್ಟು ಗಮನ ಸೆಳೆದಿದೆ. ಇದಕ್ಕೆ ಕಾರಣ ಆಗಿದ್ದು, ವಿಜಯ್ ದೇವರಕೊಂಡ.

2 / 5
ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಮನೆ ಹೊಂದಿದ್ದಾರೆ. ಸಿನಿಮಾ ಕೆಲಸಗಳ ಕಾರಣಕ್ಕೆ ಈ ನಗರಗಳಿಗೆ ಅವರು ತೆರಳಬೇಕಾಗುತ್ತದೆ.  ಹೀಗಾಗಿ, ಅವರು ಇಲ್ಲಿ ನಿವಾಸಗಳನ್ನು ಖರೀದಿ ಮಾಡಿದ್ದಾರೆ. ಆದರೆ, ಹೈದರಾಬಾದ್​ನಲ್ಲಿ ಅವರು ಎರಡು ಮನೆ ಇದೆ ಎನ್ನಬಹುದು!

3 / 5
ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್​ಗೆ ತೆರಳಿದಾಗ ವಿಜಯ್ ದೇವರಕೊಂಡ ಮನೆಗೆ ಹೆಚ್ಚು ಭೇಟಿ ನೀಡುತ್ತಾರೆ. ಈಗ ಅವರು ಲಕ್ಷಣವಾಗಿ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿದ್ದು, ಇದು ವಿಜಯ್ ದೇವರಕೊಂಡ ಮನೆ ಎನ್ನಲಾಗುತ್ತಿದೆ.

4 / 5
ಈ ಮೊದಲು ‘ಗೀತ ಗೋಂವಿಂದಂ’ ಚಿತ್ರಕ್ಕೆ ಐದು ವರ್ಷ ಆದಾಗ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ಚಿತ್ರದ ನಿರ್ದೇಶಕ ಪರಶುರಾಮ್ ಪೆಟ್ಲಾ ಫೋಟೋಗೆ ಪೋಸ್ ಕೊಟ್ಟಿದ್ದರು. ಅದು ವಿಜಯ್ ದೇವರಕೊಂಡ ನಿವಾಸ ಆಗಿತ್ತು.

5 / 5
ಈಗ ಅದೇ ಜಾಗದಲ್ಲಿ ರಶ್ಮಿಕಾ ಮಂದಣ್ಣ ಅವರು ಪೋಸ್ ಕೊಟ್ಟಿದ್ದಾರೆ. ಹೀಗಾಗಿ, ಅನೇಕರು ಇದು ವಿಜಯ್ ದೇವರಕೊಂಡ ಮನೆ ಎಂದು ಹೇಳಿದ್ದಾರೆ. ಈ ಫೋಟೋಗಳನ್ನು ತೆಗೆದಿದ್ದು ವಿಜಯ್ ದೇವರಕೊಂಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.