ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಬೇಡಿಕೆಯ ನಟಿ ಆಗಿ ಹೊರಹೊಮ್ಮಿದ್ದಾರೆ. ತಮಿಳು ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಎಷ್ಟೇ ಟ್ರೋಲ್ ಮಾಡಿದರೂ ರಶ್ಮಿಕಾ ಖ್ಯಾತಿ ಕಡಿಮೆ ಆಗಿಲ್ಲ.
ಈಗ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಆ ದಿನ ಇನ್ನೂ ಕಾಡುತ್ತಿದೆ ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ.
2023ನೇ ಸಾಲಿನ ಐಪಿಎಲ್ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ್ದರು. ಆ ದಿನದ ಹ್ಯಾಂಗೋವರ್ನಿಂದ ಹೊರಬರೋಕೆ ಅವರಿಗೆ ಆಗುತ್ತಿಲ್ಲ.
ಫೋಟೋಗಳನ್ನು ಹಂಚಿಕೊಂಡು ಆ ದಿನವನ್ನು ರಶ್ಮಿಕಾ ಮಂದಣ್ಣ ನೆನಪಿಸಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ‘ಪುಷ್ಪ 2’ ಸೇರಿ ನಾಲ್ಕು ಸಿನಿಮಾ ಇದೆ. ಹೊಸ ಚಿತ್ರದ ಕಥೆಯನ್ನು ಅವರು ಕೇಳುತ್ತಿದ್ದಾರೆ.