ಆ್ಯಕ್ಷನ್ ಕಲಿಯಲು ಬ್ಯಾಂಕಾಕ್​​ಗೆ ಹೋದ ರಶ್ಮಿಕಾ ಮಂದಣ್ಣ; ದಿನಕ್ಕೆ 8 ಗಂಟೆ ಟ್ರೇನಿಂಗ್

Updated on: Apr 18, 2026 | 1:15 PM

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ವಿದೇಶದಲ್ಲಿದ್ದಾರೆ. ಹಾಗಂತ ಅವರು ಹನಿಮೂನ್​​ಗೆ ಇಲ್ಲಿಗೆ ತೆರಳಿಲ್ಲ. ಅವರು ಹೋಗಿರೋದು ಆ್ಯಕ್ಷನ್ ಕಲಿಯೋದಕ್ಕೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. 

1 / 5
ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಾಹ ಆಗಿದ್ದಾರೆ. ಈಗ ಅವರು ಬ್ಯಾಂಕಾಕ್ ತೆರಳಿದ್ದಾರೆ. ಹಾಗಂತ ಅವರು ತೆರಳಿದ್ದು ಹನಿಮೂನ್ ವೆಕೇಶನ್​​ಗಾಗಿ ಅಲ್ಲ, ಬದಲಿಗೆ ಸಿನಿಮಾಗಾಗಿ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಾಹ ಆಗಿದ್ದಾರೆ. ಈಗ ಅವರು ಬ್ಯಾಂಕಾಕ್ ತೆರಳಿದ್ದಾರೆ. ಹಾಗಂತ ಅವರು ತೆರಳಿದ್ದು ಹನಿಮೂನ್ ವೆಕೇಶನ್​​ಗಾಗಿ ಅಲ್ಲ, ಬದಲಿಗೆ ಸಿನಿಮಾಗಾಗಿ.

2 / 5

ರಶ್ಮಿಕಾ ಮಂದಣ್ಣ ಅವರು ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆಯಂತೆ. ಅದನ್ನು ಕಲಿಯುವ ಅನಿವಾರ್ಯತೆ ರಶ್ಮಿಕಾಗೆ ಎದುರಾಗಿದೆ.

3 / 5

‘ಮೈಸಾ’ ಶೂಟಿಂಗ್​ ಆರಂಭಕ್ಕೂ ಮೊದಲು ರಶ್ಮಿಕಾ ಅವರು ಆ್ಯಕ್ಷನ್ ಕಲಿಯಬೇಕಿತ್ತು. ಹೀಗಾಗಿ, ಬ್ಯಾಂಕಾಕ್ ತೆರಳಿ ದಿನಕ್ಕೆ 8 ಗಂಟೆ ಟ್ರೇನಿಂಗ್ ಪಡೆಯುತ್ತಿದ್ದಾರೆ.

4 / 5

ಹ್ಯಾಂಡ್ ಟು ಹ್ಯಾಂಡ್ ಕಾಂಬ್ಯಾಟ್ ಟ್ರೇನಿಂಗ್ ಅನ್ನು ರಶ್ಮಿಕಾ ಪಡೆಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಈ ಮೂಲಕ ಗಮನ ಸೆಳೆದಿದ್ದಾರೆ.

5 / 5

ರಶ್ಮಿಕಾ ಮಂದಣ್ಣ ಅವರು ವಿವಾಹ ಆದ ಬಳಿಕ ಹಾಯಾಗಿ ಹನಿಮೂನ್ ಮಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಅವರು ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us