
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ದಳಪತಿ ವಿಜಯ್ ಅವರು ಜೋಡಿಯಾಗಿ ನಟಿಸಿರುವ ‘ವಾರಿಸು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 12ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ.

‘ವಾರಿಸು’ ಚಿತ್ರ ಈಗ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರು ‘ಯು’ ಪ್ರಮಾಣಪತ್ರ ನೀಡಿದ್ದಾರೆ. ಇದರಿಂದ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

‘ಯು’ ಪ್ರಮಾಣಪತ್ರ ಪಡೆದ ಚಿತ್ರವನ್ನು ಯಾವುದೇ ವಯೋಮಿತಿ ನಿರ್ಬಂಧ ಇಲ್ಲದೇ ಎಲ್ಲರೂ ನೋಡಬಹುದು. ಫ್ಯಾಮಿಲಿ ಪ್ರೇಕ್ಷಕರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಥಿಯೇಟರ್ಗೆ ಬರಲು ಇದರಿಂದ ಅನುಕೂಲ ಆಗುತ್ತದೆ.

‘ವಾರಿಸು’ ಸಿನಿಮಾದಲ್ಲಿ ಕೌಟುಂಬಿಕ ಕಥಾಹಂದರ ಇದೆ ಎನ್ನಲಾಗಿದೆ. ಆ ಕಾರಣದಿಂದಲೇ ಚಿತ್ರಕ್ಕೆ ‘ಯು’ ಪ್ರಮಾಣಪತ್ರ ಸಿಕ್ಕಿದೆ. ಒಟ್ಟಾರೆಯಾಗಿ, ಸಿನಿಮಾದ ಮೇಲೆ ದಳಪತಿ ವಿಜಯ್ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈಗಾಗಲೇ ಬಿಡುಗಡೆ ಆಗಿರುವ ‘ರಂಜಿದಮೆ..’ ಹಾಡು ಧೂಳೆಬ್ಬಿಸಿದೆ. ಸಿನಿಮಾಗೂ ಇಷ್ಟೇ ಪ್ರಮಾಣದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಎಸ್. ತಮನ್ ಸಂಗೀತ ನೀಡಿದ್ದಾರೆ.