ಭರ್ಜರಿ ಅವಕಾಶ ಬಾಚಿಕೊಂಡ ರಶ್ಮಿಕಾ ಮಂದಣ್ಣ, ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿ
Rashmika Mandanna: ರಣ್ಬೀರ್ ಕಪೂರ್, ಅಮಿತಾಬ್ ಬಚ್ಚನ್, ದಳಪತಿ ವಿಜಯ್, ಅಲ್ಲು ಅರ್ಜುನ್ ಅಂಥಹಾ ಸ್ಟಾರ್ಗಳ ಜೊತೆ ನಟಿಸಿರುವ ರಶ್ಮಿಕಾ, ಇದೀಗ ಮತ್ತೊಬ್ಬ ದೊಡ್ಡ ಸ್ಟಾರ್ ನಟನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
Updated on:Feb 09, 2024 | 2:36 PM

ನಟಿ ರಶ್ಮಿಕಾ ಮಂದಣ್ಣರ ವೃತ್ತಿ ಜೀವನದ ಗ್ರಾಫ್ ಕಳೆದ ಕೆಲ ವರ್ಷಗಳಿಂದಲೂ ಏರುಮುಖದಲ್ಲಿಯೇ ಸಾಗಿದೆ.

ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ, ಈಗ ಟಾಲಿವುಡ್, ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.

ತೆಲುಗಿನಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಬಳಿಕ ಬಾಲಿವುಡ್ನಲ್ಲೂ ಕಮಾಲ್ ಮಾಡುತ್ತಿದ್ದಾರೆ ರಶ್ಮಿಕಾ ಮಂದಣ್ಣ.

ತಮಿಳಿನ ದಳಪತಿ ವಿಜಯ್, ತೆಲುಗಿನಲ್ಲಿ ಅಲ್ಲು ಅರ್ಜುನ್, ಹಿಂದಿಯಲ್ಲಿ ರಣ್ಬೀರ್ ಕಪೂರ್, ಅಮಿತಾಬ್ ಬಚ್ಚನ್ ಅವರುಗಳ ಜೊತೆಗೆ ನಟಿಸಿದ್ದಾರೆ.

ಇದೀಗ ಮತ್ತೊಬ್ಬ ದೊಡ್ಡ ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ನಟ ಪ್ರಭಾಸ್ರ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರಭಾಸ್ ನಟಿಸಿ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿರುವ ‘ಸ್ಪಿರಿಟ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಎನ್ನಲಾಗುತ್ತಿದೆ.
Published On - 10:00 pm, Thu, 8 February 24




