
ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ಕಲಾವಿದರು, ಅದರಲ್ಲೂ ನಟಿ ಮಣಿಯರು ಸೋಶಿಯಲ್ ಮೀಡಿಯಾನ ಹೆಚ್ಚು ಬಳಕೆ ಮಾಡುತ್ತಾರೆ. ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಕೂಡ ಹೊರತಾಗಿಲ್ಲ.

ರಶ್ಮಿಕಾ ಮಂದಣ್ಣ ಅವರು ಸದ್ಯ ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಗಮನ ಸೆಳೆದಿವೆ. ಈ ಫೋಟೋಗೆ ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ ಅನ್ನೋದು ವಿಶೇಷ.

ಈ ಪೋಸ್ಟ್ನಲ್ಲಿ ಅವರು ತಮ್ಮ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ರಶ್ಮಿಕಾ ತಂಡ ತುಂಬಾನೇ ದೊಡ್ಡದಾಗಿದೆ. ಅವರಿಗಾಗಿ ಡ್ರೆಸ್ ತಯಾರಿಸುವವರು, ಮೇಕಪ್ ಮಾಡಿಕೊಡುವರು ಹೀಗೆ ಅವರು ವೇದಿಕೆ ಮೇಲೆ ಬರುವಾಗ ಅನೇಕರ ಶ್ರಮ ಇರುತ್ತದೆ.

ಇವರೆಲ್ಲರಿಗೂ ರಶ್ಮಿಕಾ ಮಂದಣ್ಣ ಅವರು ಧನ್ಯವಾದ ಹೇಳಿದ್ದಾರೆ. ಅವರಿಲ್ಲದೆ ನಾನು ಇಲ್ಲ ಎಂಬರ್ಥದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಇದಕ್ಕೆ ಅವರ ತಂಡ ಕೂಡ ಕಾರಣ ಎಂದು ಅವರು ಬಲವಾಗಿ ನಂಬಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಕಾಣುತ್ತಿದ್ದಾರೆ. ಇದರಿಂದ ಅವರಿಗೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ಗಳಿಂದ ಆಫರ್ಗಳು ಬರುತ್ತಿವೆ. ಅವರಿಗೆ ಸದ್ಯಕ್ಕಂತೂ ಕನ್ನಡ ಸಿನಿಮಾ ಮಾಡುವ ಯಾವುದೇ ಇರಾದೆ ಇಲ್ಲ.