- Kannada News Photo gallery Red Rose Demand Soars Ahead of Valentine's Day in Chikkaballapur, taja suddi
ಪ್ರೇಮಿಗಳ ದಿನಾಚರಣೆ: ಗುಲಾಬಿ ಹೂಗಳಿಗೆ ಭಾರಿ ಬೇಡಿಕೆ, ರೈತರಿಗೆ ಹಣವೋ ಹಣ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವ್ಯಾಲೆಂಟೈನ್ಸ್ ಡೇಯಿಂದಾಗಿ ಕೆಂಪು ಗುಲಾಬಿಗಳಿಗೆ ಬೇಡಿಕೆ ಹೆಚ್ಚಾಗಿದೆ. ರೈತರು ತಮ್ಮ ಗುಲಾಬಿಗಳಿಗೆ ಒಳ್ಳೆಯ ಬೆಲೆ ಪಡೆಯುತ್ತಿದ್ದಾರೆ. ಕೃಷ್ಣರೆಡ್ಡಿ ಮತ್ತು ಅವರ ಸಹೋದರರು ಎರಡುವರೆ ಎಕರೆ ಜಮೀನಿನಲ್ಲಿ ಬೆಳೆದ ಗುಲಾಬಿಗಳಿಗೆ ಭಾರೀ ಬೇಡಿಕೆ ಇದೆ. ಬೇಡಿಕೆಯಿಂದಾಗಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
Updated on:Feb 13, 2025 | 5:58 PM

ಕೆಂಪು ಗುಲಾಬಿ ಕಂಡರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಇನ್ನೂ ಫೆಬ್ರವರಿ 14 ಪ್ರೆಮಿಗಳ ದಿನ. ಪ್ರೀತಿಯ ಹುಡುಗಿಯನ್ನು ಓಲೈಸಿಕೊಳ್ಳಲು, ಒಲಿಯದ ಹುಡುಗನನ್ನು ತಬ್ಬಿಕೊಳ್ಳಲು ರೆಡ್ ರೋಸ್ ಬೇಕೇಬೇಕು. ಹಾಗಾಗಿ ಕಲರ್ ಪುಲ್ ರೆಡ್ ರೋಜ್ಗಳಿಗೆ ಇದೀಗ ಸಾಕಷ್ಟು ಡಿಮ್ಯಾಂಡ್ ಬಂದಿದೆ. ರೆಡ್ ರೋಜ್ ಬೆಳೆದ ರೈತರು ಮೊಗದಲ್ಲಿ ಮಂದಹಾಸ ಮೂಡಿದೆ. ತಲಾ ಒಂದೊಂದು ಹೂ ಗಳಿಗೆ 25 ರೂ. ಕೊಟ್ಟು ಹೂ ವರ್ತಕರು ಖರೀದಿ ಮಾಡ್ತಿದ್ದಾರೆ.

ಫೆಬ್ರವರಿ 14 ಬಂದ್ರೆ ಸಾಕು ಚಿಕ್ಕಬಳ್ಳಾಪುರ ಜಿಲ್ಲೆಯ ಗುಲಾಬಿ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಪ್ರೇಮಿಗಳ ದಿನಾವಚರಣೆ ಪ್ರಯುಕ್ತ ತಲಾ ಒಂದೊಂದು ಹೂವಿಗೆ 25 ರೂಪಾಯಿಯಿಂದ 30 ರೂಪಾಯಿ ಬೆಲೆ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ನಿವಾಸಿ ಕೃಷ್ಣರೆಡ್ಡಿ ಹಾಗೂ ಸಹೋದರರು, ಎರಡುವರೆ ಎಕರೆ ಜಮೀನಿನಲ್ಲಿ ಕಲರ್ ಪುಲ್ ಗುಲಾಬಿ ಬೆಳೆದಿದ್ದು, ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಇವರ ತೋಟದ ಗುಲಾಬಿ ನೀಳಕಾಂಡ, ಹೊಳಪು ವೈಯ್ಯಾರ, ಮುಳ್ಳುಗಳಲ್ಲಿಲ್ಲದ ಕೆಂಪು ಬಣ್ಣದ ಕೆಂಗುಲಾಬಿ ಯೇ ಇನ್ನೂ ಡಿಮ್ಯಾಂಡ್ ಹೆಚ್ಚಾಗಿದೆ.

ವರ್ಷಾನುಗಟ್ಟಲೆ ಹೂಗಳನ್ನು ಬೆಳೆಯುವುದೂ ಒಂದೇ, ಫೆಬ್ರವರಿ ತಿಂಗಳಲ್ಲಿ ಹೂಗಳನ್ನು ಬೆಳೆಯುವುದೂ ಒಂದೇ. ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೂ ಮುನ್ನ ವಿದೇಶಗಳಲ್ಲಿ ರೋಜ್ ಡೆ, ಪ್ರಪೋಸ್ ಡೇ, ಟೆಡ್ಡಿ ಡೇ, ಚಾಕೊಲೇಟ್ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಸೇರಿದಂತೆ ವಿವಿಧ ಡೇ ಗಳ ಮೂಲಕ ಪ್ರೀತಿ ಪ್ರೇಮ ಹಂಚಿಕೊಳ್ಳುತ್ತಾರೆ.

ಎಲ್ಲಾ ದಿನಗಳು ಪ್ರೇಮ ನಿವೇದನೆಗೆ ಈ ರೆಡ್ ರೋಜ್ ಬೇಕಾಗಿದೆ. ಹಾಗಾಗಿ ಚಿಕ್ಕಬಳ್ಳಾಪುರದ ಹೂ ಗಳಿಗೆ ಬೇಡಿಕೆ ಬಂದ ಕಾರಣ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
Published On - 5:44 pm, Thu, 13 February 25



















