- Kannada News Photo gallery Rishab Shetty shared his swollen legs photos to describe difficulties of Kantara shooting
ರಿಷಬ್ ಶೆಟ್ಟಿ ಕಾಲುಗಳು ಹೇಳುತ್ತಿವೆ ‘ಕಾಂತಾರ’ದ ಹಿಂದಿನ ಶ್ರಮದ ಕತೆ
Kantara: Chapter 1: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಇದೀಗ ರಿಷಬ್ ತಮ್ಮ ಕಾಲುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ರಿಷಬ್ ಅವರ ಕಾಲುಗಳೇ ಹೇಳುತ್ತಿವೆ ಕಾಂತಾರ ಶೂಟಿಂಗ್ನ ಶ್ರಮದ ಕತೆಯನ್ನು. ಚಿತ್ರಗಳ ನೋಡಿ...
Updated on: Oct 13, 2025 | 10:12 AM

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಲು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ 11 ದಿನಗಳಲ್ಲಿ ದಾಖಲೆ ಮೊತ್ತದ ಗಳಿಕೆ ಮಾಡಿದೆ ಸಿನಿಮಾ.

ರಿಷಬ್ ಶೆಟ್ಟಿ ಸತತ ಮೂರು ವರ್ಷಗಳ ಕಾಲ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ತಮ್ಮ ತಂಡದೊಂದಿಗೆ ಅವಿರತವಾಗಿ ದುಡಿದಿದ್ದಾರೆ. ಈ ಬಗ್ಗೆ ಅವರೇ ಕೆಲವೆಡೆ ಹೇಳಿಕೊಂಡಿದ್ದಾರೆ.

ಇದೀಗ ರಿಷಬ್ ಶೆಟ್ಟಿ ತಮ್ಮ ಕಾಲುಗಳ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ರಿಷಬ್ ಶೆಟ್ಟಿಯವರ ಊದಿಕೊಂಡಿರುವ ಕಾಲುಗಳೇ ಹೇಳುತ್ತಿವೆ ಕಾಂತಾರದ ಹಿಂದಿರುವ ಶ್ರಮದ ಕತೆಯನ್ನು.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಕಾಲುಗಳು ಊದಿಕೊಂಡು ಇಡೀ ದೇಹವೇ ನಿತ್ರಾಣವಾಗಿತ್ತಂತೆ ರಿಷಬ್ ಶೆಟ್ಟಿಗೆ. ಆದರೂ ಬಿಡದೇ ಚಿತ್ರೀಕರಣ ಮಾಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ವಿಷಮ ಪರಿಸ್ಥಿತಿಗಳಲ್ಲಿ, ಮೇಕಪ್ ಧರಿಸಿ ಗಂಟೆ ಗಟ್ಟಲೆ ನಡೆದೇ ಶೂಟಿಂಗ್ ಸ್ಥಳ ಸೇರಬೇಕಿತ್ತಂತೆ. ಇಂಥಹಾ ನೂರಾರು ಕಷ್ಟಗಳನ್ನು ಎದುರಿಸಿ ಸಿನಿಮಾ ಮಾಡಿದ್ದಾರೆ ರಿಷಬ್.

ರಿಷಬ್ ಹಂಚಿಕೊಂಡಿರುವ ಚಿತ್ರಗಳಲ್ಲಿ ರಿಷಬ್ ಕಾಲುಗಳು ಕಪ್ಪೆದ್ದು ಹೋಗಿವೆ. ಬಟ್ಟೆಗಳು ಬಿಗಿಯಾಗಿ ಕಟ್ಟಿದ್ದಕ್ಕೆ ರಕ್ತಚಲನೆ ಇಲ್ಲದೆ ಚರ್ಮ ಮರಗಟ್ಟಿದಂತಾಗಿರುವುದು ಕಾಣುತ್ತಿದೆ. ಕಾಲು ಊದಿಕೊಂಡಿದೆ.

ರಿಷಬ್ ಅವರೇ ಹೇಳಿರುವಂತೆ ಇಷ್ಟು ಕಷ್ಟ ಪಟ್ಟು ಸಿನಿಮಾ ಮಾಡಿದ್ದಕ್ಕೆ ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.




