- Kannada News Photo gallery Rishabh Pant and Ravindra Jadeja's counter attacking partnership helped India 338 7 in Day 1 IND vs ENG
ENG vs IND 5th Tets: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ನ ಮೊದಲ ದಿನದಾಟದ ರೋಚಕ ಫೋಟೋಗಳು ನೋಡಿ
Rishabh Pant: ಸಂತಸದ ಅಲೆಯಲ್ಲಿ ತೇಲುತ್ತಿದ್ದ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ ಇವರಿಬ್ಬರು ಬರೋಬ್ಬರಿ 222 ರನ್ಗಳ ಜೊತೆಯಾಟ ಆಡಿದರು. ಪಂತ್ ದಾಖಲೆಯ ಶತಕ ಸಿಡಿಸಿ ಔಟ್ ಆದರೆ, ಜಡೇಜಾ ಸೆಂಚುರಿಯ ಹೊಸ್ತಿಲಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 73 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.
Updated on: Jul 02, 2022 | 8:40 AM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಐದನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು ಮೊದಲ ದಿನವೇ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಬ್ಯಾಟಿಂಗ್ಗೆ ಇಳಿದ ಭಾರತ ಆರಂಭದಲ್ಲೇ ವೈಫಲ್ಯ ಅನುಭವಿಸಿತು. ಆದರೆ, ನಂತರ ನಡೆದಿದ್ದು ರಿಷಭ್ ಪಂತ್ (Rishabh Pant) ಆಟ.

98 ರನ್ಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಆಸರೆಯಾಗಿ ನಿಂತರು.

ಸಂತಸದ ಅಲೆಯಲ್ಲಿ ತೇಲುತ್ತಿದ್ದ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ ಇವರಿಬ್ಬರು ಬರೋಬ್ಬರಿ 222 ರನ್ಗಳ ಜೊತೆಯಾಟ ಆಡಿದರು. ಪಂತ್ ದಾಖಲೆಯ ಶತಕ ಸಿಡಿಸಿ ಔಟ್ ಆದರೆ, ಜಡೇಜಾ ಸೆಂಚುರಿಯ ಹೊಸ್ತಿಲಲ್ಲಿದ್ದಾರೆ.

ಭಾರತ ಪರ ಮೊದಲ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ (17) ಹಾಗೂ ಚೇತೇಶ್ವರ್ ಪೂಜಾರ (13) ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು

ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ 11 ರನ್ಗೆ ಕ್ಲಿನ್ ಬೌಲ್ಡ್ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಈ ಸಂದರ್ಭ ಜೊತೆಯಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಎದುರಾಳಿಯ ಮಾರಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು. 111 ಎಸೆಗಳಲ್ಲಿ 20 ಫೋರ್ ಮತ್ತು 4 ಸಿಕ್ಸರ್ಗಳೊಂದಿಗೆ 146 ರನ್ ಚಚ್ಚುವ ಮೂಲಕ ಪಂತ್ ತಮ್ಮ ಸ್ಪೋಟಕ ಇನಿಂಗ್ಸ್ ಅಂತ್ಯಗೊಳಿಸಿದರು.

ಮೊದಲ ದಿನದ ಅಂತ್ಯಕ್ಕೆ ಭಾರತ ತಂಡ 73 ಓವರ್ಗಳಲ್ಲಿ 338/7 ರನ್ಗಳಿಸಿದೆ. ಜಡೇಜಾ 83 ರನ್ ಗಳಿಸಿ ಮತ್ತು ಮೊಹಮ್ಮದ್ ಶಮಿ ಖಾತೆ ತೆರೆಯದೆ ಕ್ರೀಸ್ನಲ್ಲಿದ್ದಾರೆ.














