ಶಿರಸಿಗೆ ಬಂದ ಶಿಕ್ಷಾ ರೋಬೋ ಟೀಚರ್.. ಶಿಕ್ಷಾ ಟೀಚರ್ ಅಂದ್ರೆ ಮಕ್ಕಳಿಗೆಲ್ಲ ಭಾರೀ ಖುಷಿ.. ಮಕ್ಕಳಿಗೆ ಪಾಠ ಮಾಡಿ, ಆಟ ಆಡಿಸಲು ಬಂದಿದೆ ರೋಬೋ ಟೀಚರ್.. ಹೌದು ನೋಡೋಕೆ ಯೂನಿಫಾರಂ ಹಾಕಿಕೊಂಡು ಯುಕೆಜಿ ಹುಡುಗಿ ತರ ಇದ್ದರೂ ಇವಳೇ ಕ್ಲಾಸಿನ ಟೀಚರ್.. ಆಟ, ಪಾಠ ಮಾಡುವ ಈ ಗೊಂಬೆ ಟೀಚರ್ ಅಂದ್ರೆ ಮಕ್ಕಳಿಗೆ ಸಖತ್ ಪ್ರೀತಿ.. ಇವಳು ಕ್ಲಾಸಿನ ಒಳಗೆ ಬಂದ್ರೆ ಸಾಕು, ಮಕ್ಕಳು ಇವಳನ್ನ ಮುದ್ದು ಮಾಡುತ್ತಾರೆ.. ಇವಳ ಹಿಂದೆಯೇ ಸುತ್ತುತ್ತಾರೆ.. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)