RRR Movie: ಜಪಾನ್ನಲ್ಲಿ 200 ದಿನ ಪ್ರದರ್ಶನ ಕಂಡ ‘ಆರ್ಆರ್ಆರ್’ ಸಿನಿಮಾ; ಈವರೆಗೂ ಆದ ಕಲೆಕ್ಷನ್ ಎಷ್ಟು?
RRR Movie Box Office Collection: ‘ಆರ್ಆರ್ಆರ್’ ಸಿನಿಮಾ ಜಪಾನ್ನಲ್ಲಿ 200ಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡಿತ್ತು. ಅಲ್ಲಿನ ಪ್ರೇಕ್ಷಕರು ಈ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.
Updated on: May 09, 2023 | 4:12 PM

ರಾಜಮೌಳಿ ನಿರ್ದೇಶಿಸಿದ ‘ಆರ್ಆರ್ಆರ್’ ಸಿನಿಮಾ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಈ ಚಿತ್ರ ಅಬ್ಬರಿಸಿದೆ. ಜಪಾನ್ನಲ್ಲಿ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ.

ಜಪಾನ್ನಲ್ಲಿ ಭಾರತದ ಸಿನಿಮಾಗಳು ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿದ ಉದಾಹರಣೆ ಇದೆ. ಅದಕ್ಕೆ ಈಗ ಹೊಸ ಸೇರ್ಪಡೆ ‘ಆರ್ಆರ್ಆರ್’ ಸಿನಿಮಾ. ಅಲ್ಲಿ ಈ ಚಿತ್ರ ಸತತ 200 ದಿನ ಪ್ರದರ್ಶನ ಕಂಡಿದೆ.

ರಾಮ್ ಚರಣ್, ಜೂನಿಯರ್ ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ನಟಿಸಿರುವ ‘ಆರ್ಆರ್ಆರ್’ ಸಿನಿಮಾ ಜಪಾನ್ನಲ್ಲಿ 200ಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡಿತ್ತು. ಅಲ್ಲಿನ ಪ್ರೇಕ್ಷಕರು ಈ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.

200 ದಿನಗಳ ಕಾಲ ಪ್ರದರ್ಶನ ಕಂಡಿರುವ ಈ ಸಿನಿಮಾಗೆ ಜಪಾನ್ನಲ್ಲಿ ಬರೋಬ್ಬರಿ 119 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಜಪಾನ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎಂಬ ಖ್ಯಾತಿಗೆ ‘ಆರ್ಆರ್ಆರ್’ ಚಿತ್ರ ಪಾತ್ರವಾಗಿದೆ.

ವಿಶ್ವಾದ್ಯಂತ ಬಿಡುಗಡೆ ಆಗಿದ್ದ ‘ಆರ್ಆರ್ಆರ್’ ಸಿನಿಮಾ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಜಾಗತಿಕ ಮಟ್ಟದಲ್ಲಿ ರಾಜಮೌಳಿ ಅವರ ಖ್ಯಾತಿ ಹೆಚ್ಚಾಯಿತು.




