Samantha: ಕಿಂಚಿತ್ತೂ ಬಿಡುವು ಇಲ್ಲದೇ ಕೆಲಸ ಮಾಡುತ್ತಿರುವ ಸಮಂತಾ; ಅಭಿಮಾನಿಗಳಿಗೆ ಕಾಡಿದೆ ಚಿಂತೆ
Samantha Ruth Prabhu: ಕೆಲಸದ ಮಧ್ಯೆ ಸಮಂತಾ ಬ್ರೇಕ್ ತೆಗೆದುಕೊಳ್ಳುತ್ತಿಲ್ಲ. ಅವರು ಇಷ್ಟು ಬ್ಯುಸಿ ಆಗಿಬಿಟ್ಟರೆ ಮತ್ತೆ ಅವರಿಗೆ ಅನಾರೋಗ್ಯ ಉಂಟಾಗಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ.
Updated on: Jun 12, 2023 | 8:25 AM

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. Myositis ಕಾಯಿಲೆಯಿಂದ ಅವರು ಸಿಕ್ಕಾಪಟ್ಟೆ ತೊಂದರೆ ಅನುಭವಿಸುವಂತೆ ಆಗಿತ್ತು.

ಸಾಕಷ್ಟು ದಿನಗಳ ಕಾಲ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆದ ನಂತರ ಸಮಂತಾ ರುತ್ ಪ್ರಭು ಅವರ ಆರೋಗ್ಯ ಸುಧಾರಿಸಿತ್ತು. ಆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಮೊದಲಿನಂತೆ ಬ್ಯುಸಿ ಆಗಿಬಿಟ್ಟರು.

ಈಗ ಸಮಂತಾ ಅವರು ಸಖತ್ ಬ್ಯುಸಿ ಆಗಿದ್ದಾರೆ. ‘ಸಿಟಾಡೆಲ್’ ವೆಬ್ ಸಿರೀಸ್, ‘ಖುಷಿ’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್ಗಳ ಶೂಟಿಂಗ್ ಸಲುವಾಗಿ ಅವರು ಅನೇಕ ರಾಜ್ಯ ಮತ್ತು ದೇಶಗಳನ್ನು ಸುತ್ತುತ್ತಿದ್ದಾರೆ.

ಕೆಲಸದ ಮಧ್ಯೆ ಸಮಂತಾ ಬ್ರೇಕ್ ತೆಗೆದುಕೊಳ್ಳುತ್ತಿಲ್ಲ. ಅವರು ಇಷ್ಟು ಬ್ಯುಸಿ ಆಗಿಬಿಟ್ಟರೆ ಮತ್ತೆ ಅವರಿಗೆ ಅನಾರೋಗ್ಯ ಉಂಟಾಗಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ನಟಿಯ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ.

‘ಸಿಟಾಡೆಲ್’ ವೆಬ್ ಸಿರೀಸ್ನ ಭಾರತದ ವರ್ಷನ್ ಸಿದ್ಧವಾಗುತ್ತಿದೆ. ಅದರ ಚಿತ್ರೀಕರಣದ ಸಲುವಾಗಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಸೆರ್ಬಿಯಾಗೆ ತೆರಳಿದ್ದರು. ಆಗ ಅವರ ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು.




