ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ; ಇಲ್ಲಿದೆ ಕಲರ್​ಫುಲ್​ ಫೋಟೋ ಆಲ್ಬಂ

Edited By:

Updated on: Jan 14, 2022 | 12:57 PM

ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರ, ಮಕ್ಕಳಾದ ಐಶ್ವರ್ಯಾ, ಆಯುಷ್​ ಅವರು ಸಡಗರದಿಂದ ಹಬ್ಬದಲ್ಲಿ ಭಾಗಿ ಆಗಿದ್ದಾರೆ.

1 / 7
ದೇಶಾದ್ಯಂತ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮನೆಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವರ್ಷದ ಮೊದಲ ಹಬ್ಬವನ್ನು ಕುಟುಂಬದವರ ಜೊತೆಗೂಡಿ ಆಚರಿಸಲಾಗಿದೆ.

ದೇಶಾದ್ಯಂತ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮನೆಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವರ್ಷದ ಮೊದಲ ಹಬ್ಬವನ್ನು ಕುಟುಂಬದವರ ಜೊತೆಗೂಡಿ ಆಚರಿಸಲಾಗಿದೆ.

2 / 7

ನಟ ಉಪೇಂದ್ರ ಅವರ ಮನೆಯಲ್ಲಿ ಸಂಕ್ರಾಂತಿ ಸಡಗರ ಜೋರಾಗಿದೆ. ಆ ಫೋಟೋಗಳು ಈಗ ಲಭ್ಯವಾಗಿವೆ. ಹೊಸ ಭರವಸೆಯೊಂದಿಗೆ ಉಪ್ಪಿ ಕುಟುಂಬದವರು ಹಬ್ಬದಲ್ಲಿ ಭಾಗಿ ಆಗಿದ್ದಾರೆ.

3 / 7

ಬಗೆಬಗೆಯ ಅಡುಗೆಗಳನ್ನು ಮಾಡಿ, ದೇವರಿಗೆ ನೈವೇದ್ಯ ಅರ್ಪಿಸಿ, ಪೂಜೆ ಸಲ್ಲಿಸಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ. ಈ ವೇಳೆ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ, ಮಕ್ಕಳಾದ ಐಶ್ವರ್ಯಾ, ಆಯುಷ್​ ಫೋಟೋಗೆ ಪೋಸ್​ ನೀಡಿದ್ದಾರೆ.

4 / 7

ಉಪೇಂದ್ರ ಅವರ ಮನೆಯಲ್ಲಿ ಪ್ರತಿ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. 2022ರ ಸಂಕ್ರಾಂತಿ ಹಬ್ಬದಲ್ಲೂ ಆ ಪದ್ಧತಿ ಮುಂದುವರಿದಿದೆ. ಸಂಪ್ರದಾಯಿಕ ಉಡುಗೆಗಳನ್ನು ಧರಿಸಿ ಉಪ್ಪಿ ಕುಟುಂಬದ ಸದಸ್ಯರು ಮಿಂಚಿದ್ದಾರೆ.

5 / 7

ಕೊರೊನಾ ಭೀತಿ ಇರುವ ಕಾರಣ ಹೆಚ್ಚು ಅತಿಥಿಗಳನ್ನು ಕರೆಯಲು ಸಾಧ್ಯವಾಗಿಲ್ಲ. ಕೇವಲ ಕುಟುಂಬದವರು ಜೊತೆಗೂಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಕರೆದು ಹಬ್ಬವನ್ನು ಸಂಭ್ರಮಿಸುವಂತಾಗಲಿ ಎಂದು ಉಪ್ಪಿ ಕುಟುಂಬದವರು ಪ್ರಾರ್ಥಿಸಿದ್ದಾರೆ.

6 / 7

ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ಹಾಗೂ ಪುತ್ರ ಆಯುಷ್​ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಹಬ್ಬದ ಪ್ರಯುಕ್ತ ವಿಶೇಷ ಉಡುಗೆ ಧರಿಸಿ ಅಣ್ಣ-ತಂಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

7 / 7

ಐಶ್ವರ್ಯಾ ಉಪೇಂದ್ರ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ. ‘ದೇವಕಿ’ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಳು. ಆಯುಷ್​ ಆದಷ್ಟು ಬೇಗ ಚಿತ್ರರಂಗಕ್ಕೆ ಬರಲಿ ಅಂತ ಉಪ್ಪಿ ಫ್ಯಾನ್ಸ್​ ಬಯಸುತ್ತಿದ್ದಾರೆ.

Published On - 12:41 pm, Fri, 14 January 22

Loading...
Unable to load recommendations.
Follow Us