
ಹಲವು ಸೆಲೆಬ್ರಿಟಿಗಳ ಬದುಕು ಐಷಾರಾಮಿಯಾಗಿರುತ್ತದೆ. ಅವರನ್ನು ಹುಡುಕಿಕೊಂಡು ಅನೇಕ ಗಿಫ್ಟ್ಗಳು ಬರುತ್ತವೆ. ಅದೇ ರೀತಿ ದುಬಾರಿ ಗಿಫ್ಟ್ ಪಡೆದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಜ್ ಕುಂದ್ರಾ ಕಡೆಯಿಂದ ಶಿಲ್ಪಾ ಶೆಟ್ಟಿ ಅವರಿಗೆ ಭುರ್ಜ್ ಖಲೀಫಾದ 19ನೇ ಫ್ಲೋರ್ ಅಪಾರ್ಟ್ಮೆಂಟ್ ಗಿಫ್ಟ್ ಆಗಿ ಸಿಕ್ಕಿತ್ತು. ಇದರ ಮೌಲ್ಯ 50 ಕೋಟಿ ರೂಪಾಯಿ ಎನ್ನಲಾಗಿದೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಸಲ್ಮಾನ್ ಖಾನ್ ಅವರು. ಜಾಕ್ವೆಲಿನ್ಗೆ 2.5 ಕೋಟಿ ರೂಪಾಯಿ ಮೌಲ್ಯದ ಪೇಂಟಿಂಗ್ ನೀಡಿದ್ದರು ಸಲ್ಲು.

ಕತ್ರಿನಾ ಕೈಫ್ ಅವರು ‘ಅಗ್ನೀಪಥ್’ ಚಿತ್ರದಲ್ಲಿ ವಿಶೇಷ ಸಾಂಗ್ಗೆ ಹೆಜ್ಜೆ ಹಾಕಿದ್ದರು. ಈ ಚಿತ್ರಕ್ಕಾಗಿ ಅವರು ಹಣ ಪಡೆದಿಲ್ಲ. ಈ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಅವರು 2 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನು ಗಿಫ್ಟ್ ಆಗಿ ಕೊಟ್ಟಿದ್ದರು.

ಆಮಿರ್ ಖಾನ್ ಅವರು ಮಾಜಿ ಪತ್ನಿ ಕಿರಣ್ ರಾವ್ಗೆ ಬೆವರ್ಲಿ ಹಿಲ್ಸ್ನಲ್ಲಿ ಹಾಲಿಡೇ ನಿವಾಸ ಗಿಫ್ಟ್ ಆಗಿ ನೀಡಿದ್ದರು. ಇದರ ಬೆಲೆ 75 ಕೋಟಿ ರೂಪಾಯಿ.

ಆರಾಧ್ಯ ಬಚ್ಚನ್ಗೆ ಒಂದು ವರ್ಷ ಆದಾಗ ತಂದೆ ಅಭಿಷೇಕ್ ಬಚ್ಚನ್ 25 ಲಕ್ಷ ಮೌಲ್ಯದ ಮಿನಿ ಕೂಪರ್ ಉಡುಗೊರೆಯಾಗಿ ನೀಡಿದ್ದರು.