- Kannada News Photo gallery Shivarajkumar starrer Bhajarangi 2 Kannada movie gets grand opening with fans celebration
Bhajarangi 2: ಶಿವಣ್ಣನ ‘ಭಜರಂಗಿ 2’ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್; ಇಲ್ಲಿದೆ ಫೋಟೋ ಗ್ಯಾಲರಿ
Shivarajkumar: ನಟ ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನ ‘ಭಜರಂಗಿ 2’ ಚಿತ್ರವನ್ನು ಸಿನಿಪ್ರಿಯರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭ ಆಗಿದೆ.
Updated on: Oct 29, 2021 | 8:29 AM

Shivarajkumar starrer Bhajarangi 2 Kannada movie gets grand opening with fans celebration

Shivarajkumar starrer Bhajarangi 2 Kannada movie gets grand opening with fans celebration

ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಶಿವರಾಜ್ಕುಮಾರ್ ಕೂಡ ಚಿತ್ರಮಂದಿರಕ್ಕೆ ಮುಂಜಾನೆಯೇ ಆಗಮಿಸಿದರು. ಅಭಿಮಾನಿಗಳ ಉತ್ಸಾಹ ಕಂಡು ಅವರು ಖುಷಿಪಟ್ಟರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವುದು ಇಡೀ ತಂಡದ ಸಂತಸಕ್ಕೆ ಕಾರಣ ಆಗಿದೆ.

ಚಿತ್ರಮಂದಿರಕ್ಕೆ ಬಂದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಟ್ಟರು. ಶಿವಣ್ಣನಿಗೆ ಜೈಕಾರ ಕೂಗಿ ಸಂಭ್ರಮಿಸಿದರು.

ಜಾನಪದ ತಂಡಗಳನ್ನು ಕರೆಸಿ ನೃತ್ಯ ಮಾಡಿಸಲಾಗಿದೆ. ಈ ಎಲ್ಲ ದೃಶ್ಯಗಳನ್ನು ನೋಡುತ್ತಿದ್ದರೆ ಇದು ಯಾವುದೇ ಹಬ್ಬಕ್ಕೂ ಕಡಿಮೆ ಇಲ್ಲ ಎಂಬುದು ಖಚಿತ. ಹಾಗಾಗಿ ಶಿವಣ್ಣನ ಫ್ಯಾನ್ಸ್ ಪಾಲಿಗೆ ಇಂದೇ ದೀಪಾವಳಿ ಬಂದಿದೆ.

ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಚಿತ್ರದುರ್ಗದ ಪ್ರಸನ್ನ ಥಿಯೇಟರ್, ದಾವಣಗೆರೆಯ ವಸಂತಾ ಟಾಕೀಸ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣ ಆಗಿದೆ.

ಸೂರ್ಯೋದಯಕ್ಕೂ ಮುನ್ನವೇ ಕೆಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಆರಂಭ ಆಗಿದೆ. ಮುಂಜಾನೆ 5 ಗಂಟೆಗೆ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧರ್ಮಣ್ಣ, ವಸಿಷ್ಠ ಸಿಂಹ ಮುಂತಾದ ಸೆಲೆಬ್ರಿಟಿಗಳು ಬಂದ ಸಿನಿಮಾ ವೀಕ್ಷಿಸಿದ್ದಾರೆ.




