Shruti Haasan: ‘ಸಲಾರ್’ ಬೆಡಗಿ ಶೃತಿ ಹಾಸನ್ ತೆಕ್ಕೆಗೆ ಹೊಸ ಚಿತ್ರ; ನಟಿಯ ಬತ್ತಳಿಕೆಯಲ್ಲಿ ಈಗ ಇರುವ ಚಿತ್ರಗಳೆಷ್ಟು?
Mega 154: ಬಹುಭಾಷಾ ನಟಿ ಶೃತಿ ಹಾಸನ್ ಇದೀಗ ಹಲವು ಬಿಗ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’, ನಂದಮೂರಿ ಬಾಲಕೃಷ್ಣ ಅಭಿನಯದ ‘ಎನ್ಬಿಕೆ107’ ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿರಂಜೀವಿ ಜತೆ ಹೊಸ ಚಿತ್ರ ‘ಮೆಗಾ 154’ಕ್ಕೆ ಶೃತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Updated on:Mar 14, 2022 | 9:12 PM

ಬಹುಭಾಷಾ ನಟಿ ಶೃತಿ ಹಾಸನ್ ಬಹುಬೇಡಿಕೆಯ ನಟಿ.

ಸ್ಟಾರ್ ನಟರಿಗೆ ಶೃತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ಪ್ರಸ್ತುತ ಪ್ರಭಾಸ್ ಜತೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ನಲ್ಲಿ ಶೃತಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆಗಳಿವೆ.

ನಂದಮೂರಿ ಬಾಲಕೃಷ್ಣ ನಟನೆಯ ಇನ್ನೂ ಹೆಸರಿಡದ ಹೊಸ ಚಿತ್ರ ‘ಎನ್ಬಿಕೆ107’ಗೂ ಶೃತಿ ನಾಯಕಿ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ನ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದು, ಇದು ಅವರ ತೆಲುಗಿನ ಮೊದಲ ಚಿತ್ರವಾಗಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಶೃತಿ ಬತ್ತಳಿಕೆಗೆ ಇತ್ತೀಚೆಗೆ ಹೊಸ ಚಿತ್ರ ಸೇರ್ಪಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ ಇನ್ನೂ ಹೆಸರಿಡದ, ಸದ್ಯ ‘ಮೆಗಾ 154’ ಎಂಬ ಹೆಸರಿನಿಂದ ಗುರುತಿಸಲಾಗುತ್ತಿರುವ ಚಿತ್ರಕ್ಕೆ ಶೃತಿ ನಾಯಕಿಯಾಗಿದ್ದಾರೆ.

ಶೃತಿ ಹಾಸನ್ ಚಿತ್ರರಂಗದ ಜತೆಜತೆಗೆ ಬರವಣಿಗೆ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ವಿಶೇಷವೆಂದರೆ ಶೃತಿ ಹಾಸನ್ ವೆಬ್ ಸೀರೀಸ್ಗಳಲ್ಲೂ ಸತತವಾಗಿ ಬಣ್ಣ ಹಚ್ಚುತ್ತಿದ್ದಾರೆ.
Published On - 9:11 pm, Mon, 14 March 22




