
ಇತ್ತೀಚೆಗೆ ಬಿಡುಗಡೆ ಆದ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಗಮನ ಸೆಳೆಯಿತು. ಅನೇಕ ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಚಿತ್ರತಂಡದಿಂದ ಒಂದು ಹೊಸ ಸಿನಿಮಾ ಅನೌನ್ಸ್ ಆಗಿದೆ.

‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿ ನಟಿಸಿದ ಯಶ್ ಶೆಟ್ಟಿ ಮತ್ತು ಸಿದ್ದು ಮೂಲಿಮನಿ ಅವರು ಈ ಹೊಸ ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೊಸ ಪ್ರಾಜೆಕ್ಟ್ಗೆ ಮುಹೂರ್ತ ನೆರವೇರಿಸಲಾಗಿದೆ.

ಸದ್ಯಕ್ಕೆ ‘K A’ ಎಂದು ಅರ್ಧ ಟೈಟಲ್ ರಿವೀಲ್ ಮಾಡುವ ಮೂಲಕ ಕುತೂಹಲ ಮೂಡಿಸಲಾಗಿದೆ. ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಸಹ ನಿರ್ದೇಶಕನಾಗಿದ್ದ ಸಂತೋಷ್ ಈಗ ಸ್ವತಂತ್ರ ನಿರ್ದೇಶಕನಾಗಿ ಚೊಚ್ಚಲ ಸಿನಿಮಾ ಶುರುಮಾಡಿದ್ದಾರೆ.

ಯಶ್ ಶೆಟ್ಟಿ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅದೇ ರೀತಿ, ಸಿದ್ದು ಮೂಲಿಮನಿ ಕೂಡ ವಿವಿಧ ಬಗೆಯ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ‘ಧರಣಿ ಮಂಡಲ ಮಧ್ಯದೊಳಗೆ’ ಬಳಿಕ ಅವರಿಬ್ಬರು ಮತ್ತೆ ಒಂದಾಗಿದ್ದಾರೆ.

ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಬಕ್ಕೇಷ್ ಹಾಗೂ ಕಾರ್ತಿಕ್ ಚಿನ್ನೋಜಿ ರಾವ್ ಸಂಗೀತ ನಿರ್ದೇಶನ, ಗೌಸ್ ಪೀರ್ ಗೀತ ರಚನೆ, ಉಜ್ವಲ್ ಚಂದ್ರ ಸಂಕಲನ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಹಾಗೂ ಪ್ರಶಾಂತ್ ಅವರ ಕಲಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.