Kannada News Photo gallery skipping breakfast Side effects of skipping breakfast for a month Health Tips in kannada
Skipping breakfast: ಒಂದು ತಿಂಗಳು ಬೆಳಗಿನ ಉಪಹಾರ ಬಿಟ್ಟರೆ ಏನಾಗುತ್ತೆ? ನೀವು ತಿಳಿಯಲೇಬೇಕಾದ ವಿಷಯ ಇಲ್ಲಿದೆ!
ದಿನನಿತ್ಯವೂ ಉತ್ತಮ ಆರಂಭ ಪಡೆದರೆ ನಮ್ಮ ಇಡೀ ದಿನವು ಲವಲವಿಕೆಯಿಂದ ಚೆನ್ನಾಗಿ ಸಾಗುತ್ತದೆ ಎಂಬುದು ಎಲ್ಲರಿಗೂ ವೇದ್ಯವಾಗಿರುವ ಸಂಗತಿ. ಆದರೆ ಇಂದಿನ ಬಿಡುವಿಲ್ಲದ ಜೀವನದ ಜಂಜಾಟದಲ್ಲಿ ನಾವು ದಿನದ ಪ್ರಮುಖ ಉಪಹಾರವಾದ ಬೆಳಗಿನ ಉಪಾಹಾರದ ಬಗ್ಗೆ ಹೆಚ್ಚು ಗಮನ/ ಒತ್ತು ಕೊಡುವುದು ಅನಿವಾರ್ಯ ಸಂಗತಿಯಾಗಿದೆ. ಆದರೆ ಅನೇಕರು ಬೆಳಗಿನ ಉಪಾಹಾರವನ್ನು ತ್ಯಜಿಸುತ್ತಾರೆ. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ಉಂಟುಮಾಡುತ್ತದೆ. ಕ್ರಮೇಣ ನಮ್ಮ ದೇಹವು ರೋಗಗಳ ಗೂಡಾಗುತ್ತದೆ.