AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​ಎಲ್​ ಭೈರಪ್ಪ ನಿಧನ: ‘ವಂಶವೃಕ್ಷ’ದಿಂದ ‘ನಾಯಿ ನೆರಳು’ ತನಕ: ಸಿನಿಮಾವಾದ ಕೃತಿಗಳಿವು

ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕ ಎಸ್​ಎಲ್​ ಭೈರಪ್ಪ ಅವರು ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಅವರು ಇಂದು (ಸೆಪ್ಟೆಂಬರ್ 24) ಕೊನೆಯುಸಿರು ಎಳೆದಿದ್ದಾರೆ. ಅವರ ಅಗಲಿಕೆಗೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಭೈರಪ್ಪ ಅವರ ಹಲವು ಕೃತಿಗಳು ಸಿನಿಮಾ ಆಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮದನ್​ ಕುಮಾರ್​
|

Updated on: Sep 24, 2025 | 3:46 PM

Share
1971ರಲ್ಲಿ ‘ವಂಶವೃಕ್ಷ’ ಸಿನಿಮಾ ಬಿಡುಗಡೆ ಆಯಿತು. ಎಸ್​ಎಲ್​ ಭೈರಪ್ಪ ಅವರು ಬರೆದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಆ ಸಿನಿಮಾ ಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರು ನಟಿಸಿದ್ದ ಆ ಚಿತ್ರವನ್ನು ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡಿದ್ದರು.

1 / 5
‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮೂಡಿಬಂತು. ಆ ಚಿತ್ರ 1977ರಲ್ಲಿ ಬಿಡುಗಡೆ ಆಯಿತು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತ್ ಅವರು ನಿರ್ದೇಶನ ಮಾಡಿದ್ದರು. ಬಾಲಿವುಡ್ ನಟ ನಸೀರುದ್ಧೀನ್ ಶಾ ಅವರು ಅಭಿನಯಿಸಿದ್ದರು.

2 / 5
ಟಿಎನ್ ಸೀತಾರಾಮ್ ಅವರು ‘ಮತದಾನ’ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಭೈರಪ್ಪ ಅವರು ಬರೆದ ‘ಮತದಾನ’ ಕಾದಂಬರಿ ಆಧರಿಸಿ ಆ ಸಿನಿಮಾ ಸಿದ್ಧವಾಯಿತು. 2001ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ಅನಂತ್ ನಾಗ್, ತಾರಾ, ದೇವರಾಜ್ ಮುಖ್ಯ ಭೂಮಿಕೆ ನಿಭಾಯಿಸಿದ್ದರು.

3 / 5
ಎಸ್​​ಎಲ್​ ಭೈರಪ್ಪ ಅವರು ಬರೆದ ‘ನಾಯಿ ನೆರಳು’ ಕಾದಂಬರಿಯನ್ನು ಆಧರಿಸಿ ಅದೇ ಶೀರ್ಷಿಕೆಯಲ್ಲಿ ಗಿರೀಶ್ ಕಾಸರವಳ್ಳಿ ಅವರು ಸಿನಿಮಾ ನಿರ್ದೇಶನ ಮಾಡಿದರು. ಪವಿತ್ರಾ ಲೋಕೇಶ್ ಅವರು ಪ್ರಮುಖ ಪಾತ್ರ ಮಾಡಿದ್ದರು. 2006ರಲ್ಲಿ ‘ನಾಯಿ ನೆರಳು’ ಸಿನಿಮಾ ತೆರೆಕಂಡಿತು.

4 / 5
‘ಗೃಹಭಂಗ’, ‘ದಾಟು’ ಕಾದಂಬರಿಗಳನ್ನು ಆಧರಿಸಿ ಟಿವಿ ಸೀರಿಯಲ್ ಮಾಡಲಾಯಿತು. ಅಲ್ಲದೇ, ಎಸ್​ಎಲ್​ ಭೈರಪ್ಪ ಅವರು ಬರೆದ ‘ಪರ್ವ’ ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ನಾಟಕ ನಿರ್ದೇಶಿಸಿದರು. ಈ ನಾಟಕ ಹಲವಾರು ಬಾರಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.

5 / 5
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ

ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್

ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು

ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ

ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​

ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ

ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು

ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​

ದರ್ಶನ್ ಗೈರು ಹಾಜರಿ: ಸಂಕ್ರಾಂತಿ ಆಚರಣೆಗೆ ವಿಜಯಲಕ್ಷ್ಮಿ ಮುಂದಾಳತ್ವ