Updated on: May 09, 2022 | 10:11 PM
ಬಾಲಿವುಡ್ನಲ್ಲಿ ಸೋನಾಕ್ಷಿ ಸಿನ್ಹಾ ಬೇಡಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಉಳಿದಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬೇಸರವಿದೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ಸೋನಾಕ್ಷಿಗೆ ಆಫರ್ಗಳು ಬರುತ್ತಿಲ್ಲ.
ಈಗ ಸೋನಾಕ್ಷಿ ಅವರು ಎಂಗೇಜ್ಮೆಂಟ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಜಹೀರ್ ಇಕ್ಬಾಲ್ ಜತೆ ಅವರು ಇಷ್ಟು ದಿನ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಹೀಗಿರುವಾಗಲೇ ಸೋನಾಕ್ಷಿ ನಿಶ್ಚಿತಾರ್ಥದ ಬಗ್ಗೆ ಸುದ್ದಿ ಹರಡಿದೆ. ಅವರು ಹಂಚಿಕೊಂಡ ಫೋಟೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಕೈಗೆ ಉಂಗುರು ಹಾಕಿಕೊಂಡಿರುವ ಫೋಟೋವನ್ನು ಸೋನಾಕ್ಷಿ ಹಂಚಿಕೊಂಡಿದ್ದಾರೆ. ಅಲ್ಲದೆ ಬಿಗ್ ಡೇ ಎಂದು ಬರೆದುಕೊಂಡಿದ್ದಾರೆ.
ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ‘ನೋಟ್ಬುಕ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಜಹೀರ್ ಎಂಟ್ರಿ ಕೊಟ್ಟರು.
ಸೋನಾಕ್ಷಿ ಸಿನ್ಹಾ ಸದ್ಯ, ‘ಡಬಲ್ ಎಕ್ಸ್ಎಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸೋನಾಕ್ಷಿ ನಾಯಕಿ ಆದರೆ, ಜಹೀರ್ ಹೀರೋ. ಈ ಸಿನಿಮಾ ಕೆಲಸಗಳು ವಿಳಂಬವಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಜಹೀರ್ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ಸೋನಾಕ್ಷಿ ಉದ್ದನೆಯ ಸಾಲುಗಳನ್ನು ಬರೆದು ಬರ್ತ್ಡೇ ವಿಶ್ ಮಾಡಿದ್ದರು. ಅಲ್ಲದೆ, ಬೆಸ್ಟ್ ಫ್ರೆಂಡ್ ಎನ್ನುವ ವಿಚಾರವನ್ನು ಒತ್ತಿ ಹೇಳಿದ್ದರು. ಇದಕ್ಕೆ ಕಮೆಂಟ್ ಮಾಡಿದ್ದ ಜಹೀರ್, ‘ನಿಮ್ಮನ್ನು ನನ್ನ ನಾಯಕಿ ಎಂದು ಅಧಿಕೃತವಾಗಿ ಕರೆಯಬಹುದೇ’ ಎಂದಿದ್ದರು.