ಮತ್ತೆ ಮದುವೆಗೆ ಮುನ್ನ ರೋಸ್ ಸೆಲೆಬ್ರೇಷನ್ ಖುಷಿಯಲ್ಲಿ ನಟಿ ಸೋನಲ್

Updated on: Aug 31, 2024 | 8:49 PM

ಸೋನಲ್ ಮತ್ತು ತರುಣ್ ಸುಧೀರ್ ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆದರು. ಈಗ ಮತ್ತೊಮ್ಮೆ ಈ ಜೋಡಿ ಮದುವೆ ಆಗಲಿದ್ದಾರೆ. ಅದಕ್ಕೂ ಮುನ್ನ ಸೋನಲ್ ಮನೆಯಲ್ಲಿ ಕೆಲವು ಸಂಭ್ರಮಾಚರಣೆ ನಡೆದಿವೆ. ಇಲ್ಲಿವೆ ಕೆಲವು ಚಿತ್ರಗಳು.

1 / 7
ಸೋನಲ್ ಮತ್ತು ತರುಣ್ ಸುಧೀರ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ, ಹಿಂದೂ ಸಂಪ್ರದಾಯದಂತೆ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪ ಒಂದರಲ್ಲಿ ವಿವಾಹವಾದರು. ಹಲವು ಅತಿಥಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

ಸೋನಲ್ ಮತ್ತು ತರುಣ್ ಸುಧೀರ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ, ಹಿಂದೂ ಸಂಪ್ರದಾಯದಂತೆ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪ ಒಂದರಲ್ಲಿ ವಿವಾಹವಾದರು. ಹಲವು ಅತಿಥಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

2 / 7

ಶಾಸ್ತ್ರೋಕ್ತವಾದ ಮದುವೆಯ ಬಳಿಕ ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ರಿಸೆಪ್ಷನ್ ಸಹ ಆಯೋಜನೆ ಮಾಡಿದ್ದರು. ಆ ಕಾರ್ಯಕ್ರಮಕ್ಕೂ ಸಹ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

3 / 7

ಇದೀಗ ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗುತ್ತಿದ್ದಾರೆ. ಹೌದು, ಸೆಪ್ಟೆಂಬರ್ 1 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗಲಿದ್ದಾರೆ.

4 / 7

ಚರ್ಚ್​ ಮ್ಯಾರೇಜ್​ಗೂ ಮುನ್ನ ಸೋನಲ್ ಮನೆಯಲ್ಲಿ ರೋಸ್ ಸೆಲೆಬ್ರೇಷನ್ ಸೇರಿದಂತೆ ಇನ್ನೂ ಕೆಲವು ಸಂಭ್ರಮಗಳು ಅದ್ಧೂರಿಯಾಗಿ ನಡೆದಿವೆ. ಮಂಗಳೂರಿನ ಚರ್ಚ್​ನಲ್ಲಿ ಇವರ ಚರ್ಚ್ ಮ್ಯಾರೇಜ್ ನಡೆಯಲಿದೆ.

5 / 7

ಸೋನಲ್ ಹಾಗೂ ತರುಣ್ ಸುಧೀರ್, ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇವರ ಪ್ರೀತಿಗೆ ದರ್ಶನ್ ಸಹ ಕಾರಣವಂತೆ. ಇವರ ಮದುವೆಯಲ್ಲೂ ದರ್ಶನ್​ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ.

6 / 7

ಸೋನಲ್ ಮತ್ತು ತರುಣ್ ಸುಧೀರ್ ಕುಟುಂಬದವರನ್ನು ಒಪ್ಪಿಸಿ ಆಗಸ್ಟ್ 11 ರಂದು ಸೋನಲ್ ಹಾಗೂ ತರುಣ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಆ ಬಳಿಕ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದರು.

7 / 7

ಸೋನಲ್ ಮತ್ತು ತರುಣ್ ಸುಧೀರ್ ಕುಟುಂಬದವರನ್ನು ಒಪ್ಪಿಸಿ ಆಗಸ್ಟ್ 11 ರಂದು ಸೋನಲ್ ಹಾಗೂ ತರುಣ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಆ ಬಳಿಕ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದರು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us