ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬೌಲರ್ ಸಂದೀಪ್ ಶರ್ಮಾ

| Updated By: ಪೃಥ್ವಿಶಂಕರ

Updated on: Aug 20, 2021 | 5:45 PM

ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ಐಪಿಎಲ್ ಎರಡನೇ ಹಂತದ ಆರಂಭಕ್ಕೂ ಮುನ್ನ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

1 / 4
 ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ಐಪಿಎಲ್ ಎರಡನೇ ಹಂತದ ಆರಂಭಕ್ಕೂ ಮುನ್ನ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಂದೀಪ್ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂದೀಪ್ ಐಪಿಎಲ್ -2018 ರ ಹರಾಜಿನಲ್ಲಿ ಆರೆಂಜ್ ಆರ್ಮಿಗೆ 3 ಕೋಟಿ ರೂ.ಗೆ ಸೇರಿಕೊಂಡರು ಮತ್ತು ಅಂದಿನಿಂದ ಅದೇ ತಂಡದಲ್ಲಿದ್ದರು. ಹೊಸ ಬಾಲ್ ಸ್ಪೆಷಲಿಸ್ಟ್ ಸಂದೀಪ್ ಇದುವರೆಗೆ ಸನ್ ರೈಸರ್ಸ್ ಪರ 39 ವಿಕೆಟ್ ಪಡೆದಿದ್ದಾರೆ.

2 / 4
ಸಂದೀಪ್ ಶರ್ಮಾ ಬಹುಕಾಲದ ಗೆಳತಿ ನತಾಶಾ ಸಾತ್ವಿಕ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ದೀರ್ಘಕಾಲ ಡೇಟಿಂಗ್ ಮಾಡುತ್ತಿದ್ದರು. ಮನೆಯವರ ಒಪ್ಪಿಗೆಯ ಮೇರೆಗೆ ಇಬ್ಬರೂ ಮೂರು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡರು. ಸಂದೀಪ್ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ನತಾಶಾ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತ್ತಿದ್ದರು

3 / 4
 ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ಸಂದೀಪ್ ಮದುವೆ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದೆ. ಜೊತೆಗೆ ಈ ಹೊಸ ಜೋಡಿಗೆ ಇಬ್ಬರ ಮದುವೆಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅಭಿನಂದಿಸಿದೆ. ಆರೆಂಜ್ ಆರ್ಮಿಗೆ ನತಾಶಾ ಅವರನ್ನು ಸ್ವಾಗತಿಸಿದರು.

4 / 4
ನತಾಶಾ ಸಾತ್ವಿಕ್ ವೃತ್ತಿಯಲ್ಲಿ ಆಭರಣ ವಿನ್ಯಾಸಕಿ. ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಕೂಡ ಆಗಿದ್ದಾರೆ. ನತಾಶಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಮತ್ತು ಮೆಹಂದಿಯ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಸಂದೀಪ್ ಅವರ ಫೀಡ್‌ನಲ್ಲಿ ಅವರ ಜೊತೆ ಅನೇಕ ಚಿತ್ರಗಳಿವೆ.