Updated on: Jul 17, 2022 | 6:06 AM
ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಜ್ಞಾಪಕಶಕ್ತಿ ಸಮಸ್ಯೆ ಉಂಟಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಆದುದರಿಂದ ಜಾಗ್ರತೆ ವಹಿಸಿ.
ಅಧ್ಯಯನ ಹೇಳುವುದೇನು?: ಅಲ್ಯೂಮಿನಿಯಂ ಕುಕ್ ವೇರ್ ಅಲ್ಝೈಮರ್ ಕಾಯಿಲೆಯ (Alzheimer) ಆಘಾತವನ್ನು ಹೆಚ್ಚಿಸಬಹುದು ಎನ್ನುತ್ತಾರೆ ಸಂಶೋಧಕರು. ಇದು ನರಗಳ ಹಾನಿಗೂ ಕಾರಣವಾಗಬಹುದು.
Cooking Food: ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಅಲ್ಯೂಮಿನಿಯಂ ಅಂಶವೂ ಆಹಾರಕ್ಕೆ ಸೇರುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಬುದ್ಧಿಮಾಂದ್ಯತೆ: ಅಲ್ಯೂಮಿನಿಯಂ ಪಾತ್ರೆಗಳನ್ನು (aluminium vessel) ಬಳಸುವ ಅನೇಕ ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಅಲ್ಯೂಮಿನಿಯಂ ಪಾತ್ರೆಗಳನ್ನು ಸಾಮಾನ್ಯವಾಗಿ ಅನ್ನ ಮಾಡಲು, ರೈಸ್ ಕುಕ್ಕರ್ ಮತ್ತು ತರಕಾರಿಗಳನ್ನು ಬೇಯಿಸಲು ಬಳಸಲಾಗುತ್ತದೆ.
ಸಂಶೋಧಕರು ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ಕಡಿಮೆ ಮಾಡುವಂತೆ ಮತ್ತು ಅದರ ಬದಲಿಗೆ ಇತರ ಪಾತ್ರೆಗಳನ್ನು ಬಳಸಲು ಸಲಹೆ ನೀಡುತ್ತಾರೆ.