- Kannada News Photo gallery Suresh Kumar who is from Kolar acted with upendra Died in America road accident
ಉಪೇಂದ್ರ ಜೊತೆ ನಟಿಸಿದ್ದ ಸುರೇಶ್ ಕುಮಾರ್ ಅಮೆರಿಕದಲ್ಲಿ ಅಕಾಲಿಕ ಮರಣ
ಸಾವು ಯಾವಾಗ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಈಗ ಫಿಟ್ನೆಸ್ ಟ್ರೇನರ್ ಆಗಿ ಹಾಗೂ ಕಲಾವಿದನಾಗಿ ನಟಿಸಿದ್ದ ಕೋಲಾರದ ಸುರೇಶ್ ಕುಮಾರ್ ಅವರು ಅಮೆರಿಕದಲ್ಲಿ ನಿಧನ ಹೊಂದಿದ್ದಾರೆ. ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
Updated on: Sep 03, 2025 | 11:27 AM

ಉಪೇಂದ್ರ ನಟನೆಯ ‘ಉಪ್ಪಿ 2’ ಚಿತ್ರದಲ್ಲಿ ಒಂದು ಸೈಡ್ ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಂಡಿದ್ದ ಸುರೇಶ್ ಕುಮಾರ್ ಹೆಸರಿನ ಕೋಲಾರ ಮೂಲದ ವ್ಯಕ್ತಿ ಅಮೆರಿಕದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರ ಅವರ ಕುಟುಂಬಕ್ಕೆ ಶಾಕ್ ತಂದಿದೆ.

ಸುರೇಶ್ ಕುಮಾರ್ಗೆ ಈಗ 42 ವರ್ಷ ಆಗಿತ್ತು. ಅವರು ಕೋಲಾರದಲ್ಲೇ ಹುಟ್ಟಿ ಬೆಳೆದಿದ್ದರು. ನಂತರ ಅವರು ಬೆಂಗಳೂರಿಗೆ ಬಂದರು. ಇಲ್ಲಿ ಕೆಲ ಕಾಲ ನೆಲೆಸಿದರು. ಈ ವೇಳೆ ಅವರು ಬಾಡಿ ಬಿಲ್ಡಿಂಗ್ ಆರಂಭಿಸಿದರು. ಅವರು ಉಪೇಂದ್ರ ಮೊದಲಾದ ಕಲಾವಿದರಿಗೆ ಫಿಟ್ನೆಸ್ ಟ್ರೇನಿಂಗ್ ಕೊಟ್ಟಿದ್ದರು.

ಸುರೇಶ್ ಕುಮಾರ್ ಅವರು ನಂತರ ಮಾಡೆಲಿಂಗ್ ಕಡೆ ಹೊರಳಿದರು. ಈ ವೇಳೆ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಬಹುಭಾಷಾ ನಟಿ ಪ್ರಿಯಾಮಣಿ, ಕನ್ನಡದ ನಟಿ ಪ್ರೇಮಾ ಸೇರಿದಂತೆ ಅನೇಕರ ಜೊತೆ ಸುರೇಶ್ ಕುಮಾರ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

Suresh Babu (3)

ದೆಹಲಿ ಮೂಲದ ಹುಡುಗಿಯನ್ನು ಸುರೇಶ್ ವಿವಾಹ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಆರಂಭದಲ್ಲಿ ಲಂಡನ್ನಲ್ಲಿ ಇದ್ದ ಅವರು ನಂತರ ಅಮೆರಿಕಕ್ಕೆ ಶಿಫ್ಟ್ ಆದರು. ಅಮೆರಿಕಾದಲ್ಲಿ ಪಿಜಿಯೋತೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಆಗಸ್ಟ್ 1ಕ್ಕೆ ಭಾರತಕ್ಕೆ ಬಂದಿದ್ದ ಅವರು, ನಂತರ ಆಗಸ್ಟ್ 24ರಂದು ಅಮೆರಿಕ ತೆರಳಿದರು. ಅಮೆರಿಕ ತೆರಳಿದ ಕೆಲವೇ ದಿನಗಳಲ್ಲಿ ಈ ಅಪಘಾತ ಸಂಭವಿಸಿದೆ. ಇದು ಕುಟುಂಬದವರಿಗೆ ದುಃಖ ತಂದಿದೆ.




