ತೂಕ ಇಳಿಕೆಯಿಂದ ಹೃದಯ ಆರೋಗ್ಯದವರೆಗೆ ಈ ಗೇರು ಹಣ್ಣಿನ ಪ್ರಯೋಜನ ಅಷ್ಟಿಷ್ಟಲ್ಲ

Edited By:

Updated on: Apr 21, 2025 | 11:09 AM

ಬೇಸಿಗೆಗಾಲ ಬಂತೆಂದರೆ ಗೇರು ಹಣ್ಣುಗಳು ಹಳ್ಳಿಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಹೌದು, ಮಾರುಕಟ್ಟೆಯಲ್ಲಿ ಖರೀದಿಗೆ ಸಿಗದಿದ್ದರೂ ಈ ಗೇರು ಹಣ್ಣಿನ ಆರೋಗ್ಯ ಪ್ರಯೋಜನ ಅಷ್ಟಿಷ್ಟಲ್ಲ. ಈ ಹಣ್ಣಿನಿಂದ ವೈನ್ ತಯಾರಿಸಲಾಗುತ್ತದೆ. ಈ ಗೇರು ಹಣ್ಣಿನಲ್ಲಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು. ಹಾಗಾದ್ರೆ ಈ ಕುರಿತಾದ ಮಾಹಿತಿ ಇಲ್ಲಿದೆ.

1 / 5
ಸಾಮಾನ್ಯವಾಗಿ ತೂಕ ಇಳಿಸಬೇಕೆನ್ನುವವರು ಈ ಗೇರು ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಇದರಲ್ಲಿ ನಾರಿನಾಂಶ ಅಧಿಕವಾಗಿದ್ದು ಇದು ಹೆಚ್ಚು ಆಹಾರ ಸೇವನೆಯನ್ನು ತಡೆಯುತ್ತದೆ. ಅದಲ್ಲದೇ ಬೊಜ್ಜಿನ ಸಮಸ್ಯೆಯಿರುವವರಿಗೆ ಈ ಹಣ್ಣು ಬಹಳ ಉತ್ತಮ ಎನ್ನಬಹುದು.

ಸಾಮಾನ್ಯವಾಗಿ ತೂಕ ಇಳಿಸಬೇಕೆನ್ನುವವರು ಈ ಗೇರು ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಇದರಲ್ಲಿ ನಾರಿನಾಂಶ ಅಧಿಕವಾಗಿದ್ದು ಇದು ಹೆಚ್ಚು ಆಹಾರ ಸೇವನೆಯನ್ನು ತಡೆಯುತ್ತದೆ. ಅದಲ್ಲದೇ ಬೊಜ್ಜಿನ ಸಮಸ್ಯೆಯಿರುವವರಿಗೆ ಈ ಹಣ್ಣು ಬಹಳ ಉತ್ತಮ ಎನ್ನಬಹುದು.

2 / 5

ಈ ಹಣ್ಣಿನಲ್ಲಿ ಕಬ್ಬಿನಾಂಶ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆಯು ರಕ್ತ ಹೀನತೆ ಸಮಸ್ಯೆಯನ್ನು ದೂರವಾಗಿಸುತ್ತದೆ. ಗೇರುಹಣ್ಣಿನಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳ ಬೆಳವಣಿಗೆಯನ್ನು ಹೆಚ್ಚಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ.

3 / 5

ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಯಲು ಈ ಗೇರು ಹಣ್ಣು ಸಹಕಾರಿಯಾಗಿದೆ. ಇದರಲ್ಲಿರುವ ಪ್ರೊಆಂಥೋಸಯಾನಿಡಿನ್ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಈ ಹಣ್ಣನ್ನು ಸೇವಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು.

4 / 5

ಗೇರು ಹಣ್ಣಿನಲ್ಲಿ ಜೀವಸತ್ವಗಳು, ಸತು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದರ ನಿಯಮಿತವಾದ ಸೇವನೆಯಿಂದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಕಾಯಿಲೆಗಳು ಬರದಂತೆ ತಡೆಯುತ್ತದೆ.

5 / 5

ಗೇರು ಹಣ್ಣು ಸೇವನೆಯಿಂದ ಹೃದಯ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಹಣ್ಣು ಒಳ್ಳೆಯ ಕೊಬ್ಬುಗಳನ್ನು ಹೊಂದಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

Published On - 11:09 am, Mon, 21 April 25

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us