
ಬಹುಭಾಷಾ ನಟಿ ತಾಪ್ಸಿ ಪನ್ನು ಸದ್ಯ ಸಖತ್ ಬ್ಯುಸಿಯಿರುವ ನಟಿಯರಲ್ಲಿ ಓರ್ವರು.

ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ತಾಪ್ಸಿ, ಸೂಪರ್ ಸ್ಟಾರ್ ನಾಯಕರೊಂದಿಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಶಾರುಖ್ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಡಂಕಿ’ ಚಿತ್ರಕ್ಕೆ ತಾಪ್ಸಿಯನ್ನು ನಾಯಕಿ ಎಂದು ಘೋಷಿಸಲಾಗಿತ್ತು.

ತಮಿಳಿನ ‘ಜನಗಣಮನ’ ಚಿತ್ರದಲ್ಲಿ ನಟಿ ಕಾಣಿಸಕೊಳ್ಳುತ್ತಿದ್ದಾರೆ.

‘ದೋಬಾರಾ’, ‘ಏಲಿಯನ್’, ‘ಶಭಾಷ್ ಮೀಥು’, ‘ಬ್ಲರ್’ ಸೇರಿದಂತೆ ಒಟ್ಟು 7 ಚಿತ್ರಗಳು ನಟಿಯ ಬತ್ತಳಿಕೆಯಲ್ಲಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ತಾಪ್ಸಿ ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡ ತಾಪ್ಸಿಯ ಫೋಟೋಗಳು ವೈರಲ್ ಆಗಿವೆ.

ನಟಿಯ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

ತಾಪ್ಸಿ ಪನ್ನು
Published On - 9:59 am, Thu, 19 May 22