ಕುಟುಂಬದ ವಿರೋಧದ ಮಧ್ಯೆಯೂ ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ತಾರಕರತ್ನ, ಲವ್ ಸ್ಟೋರಿ ಹೀಗಿದೆ
39 ರ ಹರೆಯದಲ್ಲೆ ತೆಲುಗು ಚಿತ್ರ ನಟ ತಾರಕರತ್ನ ಇಹಲೋಕ ತ್ಯಜಿಸಿದ್ದಾರೆ. ಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಾರಕರತ್ನ ಬದುಕಿ ಬರಲಿಲ್ಲ. ಇನ್ನು ಈ ತಾರಕರತ್ನ ಯಾರು? ಕುಟುಂಬದಿಂದ ಯಾಕೆ ದೂರವಾಗಿದ್ದರು? ಎನ್ನುವ ಸಂಗತಿ ಈ ಕೆಳಗಿನಂತಿದೆ.
1 / 6
ಜನವರಿ 27ರಂದು ಆಂಧ್ರಪ್ರದೇಶ ಕುಪ್ಪಂನಲ್ಲಿ ಟಿಡಿಪಿ ನಾಯಕ ನರಾ ಲೋಕೇಶ್ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ತೆಲುಗು ಚಿತ್ರ ನಟ ತಾರಕರತ್ನ ಇದ್ದಕ್ಕಿದ್ದಂತೆ ಕುಸಿದು ಬಿದ್ದಿ ಆಸ್ಪತ್ರೆಗೆ ಸೇರಿದ್ದರು. ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಾರಕರತ್ನ ಬದುಕಿ ಬರಲಿಲ್ಲ
2 / 6
ಕೇವಲ 39ನೇ ವಯಸ್ಸಿನಲ್ಲಿ ಇಹಲೋಕ ತ್ಯಾಜಿಸಿದ ತಾರಕರತ್ನ ನಂದಮೂರಿ ತಾರಕ್ ರಾಮಾರಾವ್ ಅವರ ಮೊಮ್ಮಗ. ಎನ್ಟಿಆರ್ ಅವರ 12 ಜನ ಮಕ್ಕಳಲ್ಲಿ 5ನೇ ಪುತ್ರ ಮೋಹನಕೃಷ್ಣ. ಈ ಮೋಹನಕೃಷ್ಣನ ಮಗನೇ ತಾರಕರತ್ನ. ಬಾಲಯ್ಯಗೆ ಅಣ್ಣನ ಮಗ ಆಗಬೇಕು. ಜ್ಯೂನಿಯರ್ ಎನ್ಟಿಆರ್ಗೆ ಚಿಕ್ಕಪ್ಪನ ಮಗ.
3 / 6
ಇನ್ನು 2012ರಲ್ಲಿ ತಾರಕರತ್ನ ಅವರು 2012ರಲ್ಲಿ ಅಲೇಖ್ಯಾ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದರು. ಆದ್ರೆ, ಈ ಮದ್ವೆಗೆ ಕುಟುಂಬದವರ ವಿರೋಧ ಇದ್ದ ಕಾರಣ ತಾರಕರತ್ನ ತಂದೆ-ತಾಯಿಯನ್ನು ಬಿಟ್ಟು ಮನೆಯಿಂದ ದೂರು ಉಳಿದಿದ್ದರು.
4 / 6
ಯಾಕಂದ್ರೆ ಅಲೇಖ್ಯಾ ಅದಾಗಲೇ ಮದುವೆಯಾಗಿ ಡಿವೋರ್ಸ್ ಆಗಿತ್ತು. ಇದಕ್ಕಾಗಿಯೇ ನಂದಮೂರಿ ಕುಟುಂಬ ಮನೆಗೆ ಸೇರಿಸಿಕೊಳ್ಳಲು ಒಪ್ಪಿರಲಿಲ್ಲ. ಆದರೂ ಹಠ ಬಿಡದ ತಾರಕರತ್ನ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
5 / 6
ಇದಕ್ಕಾಗಿಯೇ ನಂದಮೂರಿ ಕುಟುಂಬ ಮನೆಗೆ ಸೇರಿಸಿಕೊಳ್ಳಲು ಒಪ್ಪಿರಲಿಲ್ಲ. ಆದರೂ ಹಠ ಬಿಡದ ತಾರಕರತ್ನ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೀಗೆ ವಿರೋಧ ಮಧ್ಯ ಡಿವೋರ್ಸ್ ಮಹಿಳೆಯನ್ನು ಮದುವೆಯಾಗಿ ವರ್ಷಗಳ ಕಾಲ ಕುಟುಂಬದಿಂದ ದೂರ ಉಳಿಯಬೇಕಾಯ್ತು.
6 / 6
ನಂತರ ತಾರಕರತ್ನ ಹಾಗೂ ಅಲೇಖ್ಯಾ ರೆಡ್ಡಿ ದಂಪತಿಗೆ ಒಂದು ಹೆಣ್ಣು ಮಗು ಆಯ್ತು. ಆ ಮಗು ಜನಿಸಿದ ಮೇಲೆ ಅಲೇಖ್ಯಾ ರೆಡ್ಡಿ ಕುಟುಂಬದವರು ತಾರಕರತ್ನ ಜೊತೆ ಕೂಡಿಕೊಂಡರು. ಆದ್ರೆ, ತಾರಕರತ್ನ ತಂದೆ ಮೋಹನಕೃಷ್ಣನವರ ಮನಸ್ಸು ಮಾತ್ರ ಮನಸ್ಸು ಕರಗಲಿಲ್ಲ. ಬಹಳ ವರ್ಷಗಳ ಮಗನನ್ನು ಮನೆಯಿಂದ ದೂರ ಇಟ್ಟಿದ್ದರು. ಬಳಿಕ ಕೋಪ ಕೊಂಚ ಕಡಿಮೆಯಾಗಿ ಆಗಾಗ ಮಾತನಾಡಿಸುತ್ತಿದ್ದರು. ಆದ್ರೆ, ಅದು ಅಷ್ಟಕಷ್ಟೇ. ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮಗಳು ಇದ್ದರೆ ಮಾತ್ರ ತಾರಕರತ್ನ ಅವರು ತಮ್ಮ ಕುಟುಂಬದವರನ್ನು ಭೇಟಿ ಮಾಡುತ್ತಿದ್ದರಂತೆ.
Published On - 11:53 pm, Sat, 18 February 23