Kannada News Photo gallery Tharun Sudhir Sonal Monteiro grand wedding in Bengaluru attended by celebrities Entertainment News in Kannada
Photo Gallery: ತರುಣ್ ಸುಧೀರ್-ಸೋನಲ್ ಮದುವೆಗೆ ಸಾಕ್ಷಿಯಾದ ಸ್ಯಾಂಡಲ್ವುಡ್
ಸೋನಲ್ ಮಾಂತೆರೋ ಹಾಗೂ ತರುಣ್ ಸುಧೀರ್ ಅವರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿದ ವಿವಾಹ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆದರು. ನವಜೋಡಿಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಬಂದು ಸೋನಲ್ ಮತ್ತು ತರುಣ್ಗೆ ಹಾರೈಸಿದ್ದಾರೆ.
1 / 7
ಸ್ಯಾಂಡಲ್ವುಡ್ನಲ್ಲಿ ತರುಣ್ ಸುಧೀರ್ ಅವರು ಯಶಸ್ವಿ ನಿರ್ದೇಶಕನಾಗಿದ್ದಾರೆ. ‘ಕಾಟೇರ’ ಸಿನಿಮಾದ ಬಿಗ್ ಸಕ್ಸಸ್ ಬಳಿಕ ಅವರು ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ಆಲೋಚಿಸಿದರು. ಇಂದು (ಆಗಸ್ಟ್ 11) ನಟಿ ಸೋನಲ್ ಜೊತೆ ತರುಣ್ ಮದುವೆ ನೆರವೇರಿದೆ.
2 / 7
ಸೋನಲ್ ಮಾಂತೆರೋ ಅವರು ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ರಾಬರ್ಟ್’ ಚಿತ್ರದಲ್ಲಿ ತರುಣ್ ಸುಧೀರ್ ಜೊತೆ ಕೆಲಸ ಮಾಡಿದ ಸೋನಲ್ ಅವರು ಈಗ ದಾಂಪತ್ಯ ಜೀವನ ಆರಂಭಿಸಿದ್ದಾರೆ.
3 / 7
ಬೆಂಗಳೂರಿನಲ್ಲಿ ಸಖತ್ ಗ್ರ್ಯಾಂಡ್ ಆಗಿ ತರುಣ್ ಸುಧೀರ್ ಮತ್ತು ಸೋನಲ್ ಮಾಂತೆರೋ ಅವರು ಮದುವೆ ಆಗಿದ್ದಾರೆ. ಆಗಸ್ಟ್ 10ರ ಸಂಜೆ ರಿಸೆಪ್ಷನ್ ನಡೆದಿತ್ತು. ಆ.11ರಂದು ವಿವಾಹ ಸಮಾರಂಭ ಜರುಗಿತು. ಮದುವೆಯ ಫೋಟೋಗಳು ಲಭ್ಯವಾಗಿವೆ.
4 / 7
ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕ ಕಲಾವಿದರು ಈ ಮದುವೆಗೆ ಸಾಕ್ಷಿಯಾದರು. ಚಿತ್ರರಂಗದ ಬಹುತೇಕ ಎಲ್ಲರ ಜೊತೆಗೂ ತರುಣ್ ಸುಧೀರ್ ಅವರು ಆತ್ಮೀಯತೆ ಹೊಂದಿದ್ದಾರೆ.
5 / 7
ತರುಣ್ ಸುಧೀರ್ ಹಾಗೂ ಸೋನಲ್ ಮಾಂತೆರೋ ಅವರ ಬಾಳಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ, ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕೂಡ ವಿವಾಹಕ್ಕೆ ಹಾಜರಿ ಹಾಕಿದರು.
6 / 7
ಬಹುಭಾಷಾ ನಟ ಜಗಪತಿ ಬಾಬು ಅವರು ಬೆಂಗಳೂರಿಗೆ ಬಂದು ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿದ ‘ರಾಬರ್ಟ್’, ‘ಕಾಟೇರ’ ಸಿನಿಮಾಗಳಲ್ಲಿ ಜಗಪತಿ ಅವರು ನಟಿಸಿದ್ದಾರೆ. ಇಬ್ಬರ ನಡುವೆ ಬಾಂಧವ್ಯ ಇದೆ.
7 / 7
ನಿರೂಪಕಿ ಅನುಶ್ರೀ, ನಟಿ ನಿಶ್ವಿಕಾ ನಾಯ್ಡು, ರಚಿತಾ ರಾಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತರುಣ್-ಸೋನಲ್ ಮದುವೆಗೆ ಬಂದು ಶುಭ ಕೋರಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.