Photo Gallery: ಸಿನಿಮಾ, ರಾಜಕೀಯದ ಗಣ್ಯರಿಗೆ ತಲುಪಿತು ತರುಣ್-ಸೋನಲ್ ಮದುವೆ ಆಮಂತ್ರಣ ಪತ್ರ

|

Updated on: Aug 07, 2024 | 7:34 PM

ನಟಿ ಸೋನಲ್​ ಮಾಂಥೆರೋ ಹಾಗೂ ನಿರ್ದೇಶಕ ತರುಣ್​ ಸುಧೀರ್​ ಅವರು ಆಗಸ್ಟ್​ 10 ಮತ್ತು 11ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಕಿಚ್ಚ ಸುದೀಪ್​, ರಚಿತಾ ರಾಮ್​, ಶ್ರೀಮುರಳಿ, ಮಾಲಾಶ್ರೀ ಮುಂತಾದವರನ್ನು ಆಹ್ವಾನಿಸಲಾಗಿದೆ. ರಾಜಕೀಯ ಮುಖಂಡರಿಗೂ ಆಹ್ವಾನ ನೀಡಲಾಗಿದೆ.

1 / 9
ಸ್ಯಾಂಡಲ್​ವುಡ್​ನಲ್ಲಿ ನಿರ್ದೇಶಕ ತರುಣ್​ ಸುಧೀರ್​ ಅವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ತರುಣ್ ಸುಧೀರ್​ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ.

2 / 9
‘ಕಾಟೇರ’, ‘ರಾಬರ್ಟ್​’ ಸಿನಿಮಾಗಳ ಮೂಲಕ ತರುಣ್​ ಸುಧೀರ್​ ದೊಡ್ಡ ಯಶಸ್ಸು ಪಡೆದರು. ಬಹುಬೇಡಿಕೆಯ ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ಶ್ರೀಮುರಳಿ ಅವರನ್ನು ತರುಣ್​ ಆಹ್ವಾನಿಸಿದ್ದಾರೆ.

3 / 9
ಮಾಲಾಶ್ರೀ ಪುತ್ರಿ ಆರಾಧನಾ ರಾಮ್​ ಅವರನ್ನು ಲಾಂಚ್​ ಮಾಡಿದ್ದೇ ತರುಣ್​ ಸುಧೀರ್​. ‘ಕಾಟೇರ’ ಸಿನಿಮಾಗೆ ಆರಾಧನಾ ನಾಯಕಿಯಾಗಿ ನಟಿಸಿದರು. ಅವರಿಗೂ ವಿವಾಹದ ಆಮಂತ್ರಣ ನೀಡಲಾಗಿದೆ. ಈ ವೇಳೆ ಮಾಲಾಶ್ರೀ ಕೂಡ ಜೊತೆಗಿದ್ದರು.

4 / 9
ರಚಿತಾ ರಾಮ್​, ಉಪೇಂದ್ರ, ರಾಘವೇಂದ್ರ ರಾಜ್​ಕುಮಾರ್​ ಅವರಿಗೂ ತರುಣ್​ ಸುಧೀರ್​ ಆಹ್ವಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅದ್ದೂರಿ ಮದುವೆಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

5 / 9
Photo Gallery: ಸಿನಿಮಾ, ರಾಜಕೀಯದ ಗಣ್ಯರಿಗೆ ತಲುಪಿತು ತರುಣ್-ಸೋನಲ್ ಮದುವೆ ಆಮಂತ್ರಣ ಪತ್ರ

6 / 9
ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರನ್ನು ತರುಣ್​ ಸುಧೀರ್​ ಅವರು ಮದುವೆಗೆ ಆಹ್ವಾನಿಸಿದ ಕ್ಷಣ ಇದು. ಪರಿಸರ ಸ್ನೇಹಿಯಾಗಿ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ. ಇದನ್ನು ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

7 / 9
ಮದುವೆ ಸಲುವಾಗಿ ತರುಣ್​ ಸುಧೀರ್​ ಅವರು ಬ್ರೇಕ್​ ಪಡೆದಿದ್ದಾರೆ. ಹಿಟ್​ ಸಿನಿಮಾಗಳನ್ನು ನೀಡಿದ ಅವರಿಗೆ ಚಂದನವನದಲ್ಲಿ ತುಂಬಾ ಬೇಡಿಕೆ ಇದೆ. ಶಿವರಾಜ್​ಕುಮಾರ್​, ಗೀತಾ ದಂಪತಿಯನ್ನು ಭೇಟಿಯಾಗಿ ತರುಣ್​ ಆಹ್ವಾನ ಪತ್ರಿಕೆ ನೀಡಿದ್ದಾರೆ.

8 / 9
ರಾಜಕೀಯ ಕ್ಷೇತ್ರದಲ್ಲೂ ಅನೇಕರ ಜೊತೆ ತರುಣ್​ ಸುಧೀರ್​ ಅವರು ಆತ್ಮೀಯತೆ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರು ಈ ಮದುವೆಗೆ ಬರುವ ನಿರೀಕ್ಷೆ ಇದೆ.

9 / 9
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರುಣ್​ ಸುಧೀರ್​ ಅವರು ಆಹ್ವಾನಿಸಿ ಬಂದಿದ್ದಾರೆ. ಆ ಸಂದರ್ಭದ ಫೋಟೋ ಲಭ್ಯವಾಗಿದೆ. ‘ರಾಬರ್ಟ್​’ ಸಿನಿಮಾದಲ್ಲಿ ತರುಣ್​ ಸುಧೀರ್​ ಮತ್ತು ಸೋನಲ್​ ಅವರು ಜೊತೆಯಾಗಿ ಕೆಲಸ ಮಾಡಿದ್ದರು.