Toxic: ‘ಟಾಕ್ಸಿಕ್’ ಸಿನಿಮಾ ಮುಹೂರ್ತ, ಇಲ್ಲಿವೆ ಯಶ್ ಮತ್ತು ಗ್ಯಾಂಗ್ ಚಿತ್ರಗಳು
Toxic: ಯಶ್ ನಟಿಸಲಿರುವ ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಸಮಾರಂಭ ಇಂದು (ಆಗಸ್ಟ್ 08) ನಡೆದಿದೆ. ಕಾರ್ಯಕ್ರಮದ ಕೆಲವು ಸುಂದರ ಚಿತ್ರಗಳು ಇಲ್ಲಿವೆ ನೋಡಿ...
Updated on:Aug 08, 2024 | 11:30 AM

ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಇಂದು (ಆಗಸ್ಟ್ 08) ರಂದು ನಡೆದಿದೆ. ಕಾರ್ಯಕ್ರಮದಲ್ಲಿ ಚಿತ್ರತಂಡ ಮಾತ್ರವೇ ಭಾಗವಹಿಸಿರುವುದು ವಿಶೇಷ.

ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳನ್ನು ಮುಹೂರ್ತಕ್ಕೆ ಆಹ್ವಾನಿಸಲಾಗಿಲ್ಲ. ಬದಲಿಗೆ ಸರಳವಾಗಿ ಸಿನಿಮಾದ ಲೈಟ್ ಬಾಯ್ಯಿಂದ ಸಿನಿಮಾಕ್ಕೆ ಕ್ಲಾಪ್ ಮಾಡಿಸಲಾಗಿದೆ.

ಸ್ವತಃ ಯಶ್, ನಿರ್ಮಾಪಕರು ಹಾಗೂ ಇನ್ನೂ ಕೆಲವರು ದೇವರಿಗೆ ಪೂಜೆ ಮಾಡುವ ಮೂಲಕ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ.

ನೆಲಮಂಗಲ ರಸ್ತೆಯಲ್ಲಿರುವ ಎಚ್ಎಂಟಿ ಕಾರ್ಖಾನೆ ಬಳಿ ಹಾಕಲಾಗಿರುವ ಬೃಹತ್ ಸೆಟ್ನಲ್ಲಿ ಸಿನಿಮಾದ ಮುಹೂರ್ತ ನಡೆಸಲಾಗಿದೆ.

ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕಿ ಗೀತು ಮೋಹನ್ದಾಸ್ ಸಹ ಭಾಗಿಯಾಗಿದ್ದರು. ಗೀತು ಮೋಹನ್ದಾಸ್ ಪತಿ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಹಳ ವರ್ಷಗಳ ಬಳಿಕ ಯಶ್ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಲವು ತಿಂಗಳುಗಳ ಹಿಂದೆ ಸಿನಿಮಾದ ಹೆಸರು ಘೋಷಣೆ ಮಾಡಲಾಗಿತ್ತು.

‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಪಕ ವೆಂಕಟ್ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ನಿಂದ ಈ ಸಿನಿಮಾ ನಿರ್ಮಾಣಗೊಳ್ಳಲಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ನ ಕಿಯಾರಾ ಅಡ್ವಾಣಿ, ಸ್ಟಾರ್ ನಟಿ ನಯನತಾರಾ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದ್ದು ಮುಂದಿನ ವರ್ಷದ ಅಂತ್ಯದ ವೇಳೆಗೆ ಅಥವಾ 2026 ರ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
Published On - 11:30 am, Thu, 8 August 24



















