Kannada News » Photo gallery » thieves who were printing fake notes in a dilapidated building were caught in a khaki trap, here are the fake looks krn
Chikkaballapur: ಪಾಳು ಬಿದ್ದ ಕಟ್ಟಡದಲ್ಲಿ ಖೋಟಾನೋಟು ಪ್ರಿಂಟ್ ಮಾಡ್ತಿದ್ದ ಖದೀಮರು ಖಾಕಿ ಬಲೆಗೆ, ಇಲ್ಲಿವೆ ನೋಡಿ ನಕಲಿ ನೋಟಗಳು
TV9kannada Web Team | Edited By: Kiran Hanumant Madar
Updated on: Jan 21, 2023 | 7:22 AM
2000 ರೂಪಾಯಿ ನೋಟು ನೋಡೋಣ ಅಂದ್ರೂ ಎಲ್ಲೂ ಕಾಣುತ್ತಿಲ್ಲ. ತೀರಾ ಅಪರೂಪ ಆಗೋಗಿದೆ. ಆದರೆ ಅದೊಂದು ಜಾಗದಲ್ಲಿ ಮಾತ್ರ ಒಂದಲ್ಲ ಎರಡಲ್ಲ ಕೋಟ್ಯಾಂತರ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ಗರಿ ಗರಿ ನೋಟುಗಳನ್ನ ನೋಡಿ ಪೊಲೀಸರೇ ದಂಗಾಗಿದ್ರು.
Jan 21, 2023 | 7:22 AM
ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿಯ ಪೊಲೀಸರು, ಖೋಟಾನೋಟು ಮುದ್ರಣದ ಅಡ್ಡೆ ಮೇಲೆ ದಾಳಿ ಮಾಡಿ ಬರೋಬ್ಬರಿ 1 ಕೋಟಿ 29 ಲಕ್ಷ ಮೌಲ್ಯದ 2000 ಮುಖಬೆಲೆಯ ಖೋಟಾನೋಟುಗಳನ್ನ ವಶಕ್ಕೆ ಪಡೆದಿದ್ದಾರೆ.
1 / 6
ಅಬ್ಬಬ್ಬಾ ಕಂತೆ ಕಂತೆ ನೋಟು ಬಾಕ್ಸ್ ತುಂಬ ತುಂಬಿವೆ. ರೂಮ್ನಲ್ಲಿ ಚೆಲ್ಲಾಡಿವೆ. ರಾಶಿಗಟ್ಟಲೇ ಇರುವ ಈ ಕನಕಾಂಬರದ ಬಣ್ಣ ನೋಡ್ತಿದ್ರೆ ಕಣ್ಣರಳುತ್ತೆ. ಆದರೆ ನೀವಂದುಕೊಂಡಂತೆ ಇವೆಲ್ಲ ಅಸಲಿಯಲ್ಲ. ಅಸಲಿ ತಲೆ ಮೇಲೆ ಹೊಡೆದಂತಿರುವ ನಕಲಿ ನೋಟುಗಳು.
2 / 6
ಖೋಟಾ ನೋಟು ಪ್ರಿಂಟ್ ಆಗುತ್ತಿರುವ ಪಕ್ಕಾ ಮಾಹಿತಿ ಪಡೆದಿದ್ದ ಪೊಲೀಸರು, ಉಲವಾಡಿ ಬಳಿಯ ಬಾರ್ನ್ ಫೌಂಡೇಶನ್ ಹೆಸರಿನ ಪಾಳು ಬಿದ್ದ ಕಟ್ಟಡಕ್ಕೆ ನುಗ್ಗಿದ್ದಾರೆ. ವೇಳೆ 2000 ಮುಖಬೆಲೆಯ ನಕಲಿ ನೋಟುಗಳು, ನೋಟು ತಯಾರಿಕೆಗೆ ಬಳಸುತ್ತಿದ್ದ ಜೆರಾಕ್ಸ್ ಮಿಷನ್, ಪ್ರಿಂಟರ್, ಲ್ಯಾಮಿನೇಟರ್, 1 ಲ್ಯಾಪ್ ಟಾಪ್ ಹಾಗೂ 3 ಮೊಬೈಲ್ ಸೀಝ್ ಮಾಡಿದ್ದಾರೆ.
3 / 6
ದಾಳಿ ವೇಳೆ ಬೆಂಗಳೂರು ಮೂಲದ ದಾವೂದ್ ವಾಸಿಂ, ಶೇಖ್ ಹಿದಾಯತ್ ಹಾಗೂ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿವ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು 3 ಕೋಟಿ ಮೌಲ್ಯದ 2000 ರ ಮುಖಬೆಲೆಯ ನೋಟುಗಳನ್ನ ವ್ಯಕ್ತಿಯೊಬ್ಬರಿಗೆ ಪ್ರಿಂಟ್ ಮಾಡಿಕೊಡುವುದಾಗಿ ಡೀಲ್ ಪಡೆದಿದ್ದರಂತೆ.
4 / 6
ಹೀಗಾಗಿ ಪಾಳು ಕಟ್ಟಡವನ್ನ ಬಾಡಿಗೆಗೆ ಪಡೆದು ಅಲ್ಲಿ ತಮ್ಮ ಕೆಲಸ ಮಾಡುತ್ತಿದ್ದರು ಸದ್ಯ ಮೂವರು ಲಾಕ್ ಆಗಿದ್ದು, ಕೃತ್ಯದಲ್ಲಿ ಶಾಮೀಲಾಗಿರುವ ಶಂಕರಪ್ಪ, ರಾಜಣ್ಣ, ಇಂತಿಯಾಜ್, ಅಬ್ದುಲ್ಲಾ ಅನ್ನೋರಿಗಾಗಿ ಶೋಧ ನಡೀತಿದೆ.
5 / 6
ಒಟ್ಟಿನಲ್ಲಿ ಈ ಕ್ರಿಮಿಗಳ ಹಿಂದೆ ದೊಡ್ಡ ಜಾಲವೇ ಇರುವ ಸಂಶಯವಿದೆ. ಕೋಟಿ ಕೋಟಿ ಲೆಕ್ಕದಲ್ಲಿ ನಕಲಿ ನೋಟು ಪ್ರಿಂಟ್ ಮಾಡ್ತಿದ್ದವರ ಬುಡ ಜಾಲಾಡಲು ಪೊಲೀಸರು ಮುಂದಾಗಿದ್ದಾರೆ.