- Kannada News Photo gallery Three Pakistan hockey players, physio banned for life for seeking asylum in Europ
ಮೂವರು ಆಟಗಾರರು, ಫಿಸಿಯೋಗೆ ಆಜೀವ ನಿಷೇಧ ಹೇರಿದ ಪಾಕಿಸ್ತಾನ ಹಾಕಿ ಫೆಡರೇಶನ್
Pakistan Hockey: ಪಾಕಿಸ್ತಾನ ಹಾಕಿ ಫೆಡರೇಶನ್‌ಗೆ ತಿಳಿಯದಂತೆ ಯುರೋಪಿಯನ್ ದೇಶಕ್ಕೆ ಪರಾರಿಯಾಗಲು ಯತ್ನಿಸಿದ ಮೂವರು ಪಾಕಿಸ್ತಾನಿ ಹಾಕಿ ಆಟಗಾರರು ಮತ್ತು ಫಿಸಿಯೋಥೆರಪಿಸ್ಟ್‌ಗೆ ಆಜೀವ ನಿಷೇಧ ಹೇರಲಾಗಿದೆ. ವಾಸ್ತವವಾಗಿ, ಈ ಮೂವರು ಆಟಗಾರರು ಯಾವುದೇ ಮ್ಯಾಚ್ ಫಿಕ್ಸಿಂಗ್ ಆರೋಪವನ್ನಾಗಲಿ ಅಥವಾ ಬೇರೆ ಯಾವುದೇ ಆರೋಪದಲ್ಲಿ ಸಿಕ್ಕಿಬಿದ್ದು, ಆಜೀವ ನಿಷೇಧಕ್ಕೊಳಗಾಗಿಲ್ಲ.
Updated on: Aug 29, 2024 | 3:54 PM

ಪಾಕಿಸ್ತಾನ ಹಾಕಿ ಫೆಡರೇಶನ್‌ಗೆ ತಿಳಿಯದಂತೆ ಯುರೋಪಿಯನ್ ದೇಶಕ್ಕೆ ಪರಾರಿಯಾಗಲು ಯತ್ನಿಸಿದ ಮೂವರು ಪಾಕಿಸ್ತಾನಿ ಹಾಕಿ ಆಟಗಾರರು ಮತ್ತು ಫಿಸಿಯೋಥೆರಪಿಸ್ಟ್‌ಗೆ ಆಜೀವ ನಿಷೇಧ ಹೇರಲಾಗಿದೆ. ವಾಸ್ತವವಾಗಿ, ಈ ಮೂವರು ಆಟಗಾರರು ಯಾವುದೇ ಮ್ಯಾಚ್ ಫಿಕ್ಸಿಂಗ್ ಆರೋಪವನ್ನಾಗಲಿ ಅಥವಾ ಬೇರೆ ಯಾವುದೇ ಆರೋಪದಲ್ಲಿ ಸಿಕ್ಕಿಬಿದ್ದು, ಆಜೀವ ನಿಷೇಧಕ್ಕೊಳಗಾಗಿಲ್ಲ.

ಬದಲಿಗೆ ಪಾಕಿಸ್ತಾನ ಹಾಕಿ ತಂಡದಲ್ಲಿನ ಆರ್ಥಿಕ ದುಸ್ಥಿಯೇ ಆಟಗಾರರ ಈ ನಿರ್ಧಾರಕ್ಕೆ ಕಾರಣ ಎಂದು ವರದಿಯಾಗಿದೆ. ಅಲ್ಲದೆ ಆರ್ಥಿಕ ಸಮಸ್ಯೆತಿಂದಾಗಿ ಆಟಗಾರರಿಗೆ ಸರಿಯಾಗಿ ಭತ್ಯೆಯನ್ನು ಸಹ ನೀಡಲಾಗಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಪಿಎಚ್‌ಎಫ್ ಪ್ರಧಾನ ಕಾರ್ಯದರ್ಶಿ ರಾಣಾ ಮುಜಾಹಿದ್, ಇದೀಗ ಆಜೀವ ನಿಷೇಧಕ್ಕೊಳಗಾಗಿರುವ ಮುರ್ತಾಜಾ ಯಾಕೂಬ್, ಇಹ್ತೇಶಾಮ್ ಅಸ್ಲಾಮ್ ಮತ್ತು ಅಬ್ದುರ್ ರೆಹಮಾನ್ ಮತ್ತು ಫಿಸಿಯೋಥೆರಪಿಸ್ಟ್ ವಕಾಸ್ ಕಳೆದ ತಿಂಗಳು ನೆದರ್ಲ್ಯಾಂಡ್ಸ್ ಮತ್ತು ಪೋಲೆಂಡ್‌ಗೆ ನೇಷನ್ಸ್ ಕಪ್ ಟೂರ್ನಿಗಾಗಿ ತಂಡದೊಂದಿಗೆ ಪ್ರವಾಸ ಮಾಡಿದ್ದರು.

ಆದರೆ ಪ್ರವಾಸ ಮುಗಿದ ಕೂಡಲೇ ಇಡೀ ತಂಡ ದೇಶಕ್ಕೆ ವಾಪಸ್ಸಾಗಿತ್ತು. ಆ ಬಳಿಕ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಮಂಡಳಿ ತರಬೇತಿ ಶಿಬಿರವನ್ನು ಘೋಷಿಸಿದಾಗ, ಈ ಮೂವರೂ ದೇಶೀಯ ಸಮಸ್ಯೆಗಳಿಂದ ಶಿಬಿರಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಮಗೆ ಹೇಳಿದ್ದರು.

ಆ ಬಳಿಕ ಈ ಮೂವರು ತಂಡಕ್ಕೆ ನೀಡಲಾದ ಅದೇ ಷೆಂಗೆನ್ ವೀಸಾದಲ್ಲಿ ಮತ್ತೊಮ್ಮೆ ಹಾಲೆಂಡ್‌ಗೆ (ನೆದರ್‌ಲ್ಯಾಂಡ್ಸ್) ಹೋಗಿದ್ದಾರೆ ಮತ್ತು ಅಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಆಟಗಾರರ ಈ ನಡೆ ಪಾಕಿಸ್ತಾನ ಹಾಕಿಗೆ ನಿರಾಶಾದಾಯಕ ಪ್ರಕರಣವಾಗಿದೆ. ಇವರ ಈ ನಡುವಳಿಕೆಯಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಯುರೋಪಿಯನ್ ರಾಷ್ಟ್ರಗಳಿಗೆ ವೀಸಾಗಾಗಿ ಅರ್ಜಿ ಸಲ್ಲಿಸಲು ಕಷ್ಟವಾಗುತ್ತದೆ.

ಹೌದು, PHF ನ ಆರ್ಥಿಕ ಪರಿಸ್ಥಿತಿಯು ಸಾಕಷ್ಟು ಸವಾಲಿನದ್ದಾಗಿದೆ. ಇದರಿಂದಾಗಿ ಆಟಗಾರರು ತಮ್ಮ ಪ್ರಯಾಣ ಭತ್ಯೆ ಮತ್ತು ವೇತನವನ್ನು ಸರಿಯಾದ ಸಮಯಕ್ಕೆ ಪಡೆಯಲಾಗುತ್ತಿಲ್ಲ. ಆದರೆ ಹಾಗಂದ ಮಾತ್ರಕ್ಕೆ ಆಟಗಾರರು ರಾಷ್ಟ್ರೀಯ ತಂಡವನ್ನು ತೊರೆಯಲು ಮತ್ತು ದೇಶಕ್ಕೆ ಅಪಖ್ಯಾತಿ ತರುವ ಕೆಲಸವನ್ನು ಮಾಡುವುದು ತರವಲ್ಲ.

ಹೀಗಾಗಿ ಈ ಮೂವರು ಆಟಗಾರರ ಮೇಲೆ ಪಿಎಚ್‌ಎಫ್ ಜೀವಿತಾವಧಿ ನಿಷೇಧವನ್ನು ಅನುಮೋದಿಸಿದೆ. ಅಲ್ಲದೆ PHF ಅಧ್ಯಕ್ಷರನ್ನು ಶಿಸ್ತು ಕ್ರಮಕ್ಕಾಗಿ ಅವರನ್ನು ಮರಳಿ ಕರೆತರಲು ಪಾಕಿಸ್ತಾನದ ದೂತಾವಾಸದ ಮೂಲಕ ಪ್ರಯತ್ನಗಳನ್ನು ಮಾಡುವಂತೆ ಕೇಳಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ನಾವು ಈಗಾಗಲೇ ಆಂತರಿಕ ಮತ್ತು ವಿದೇಶಾಂಗ ಸಚಿವಾಲಯಗಳಿಗೆ ತಿಳಿಸಿದ್ದೇವೆ ಎಂದು ಮುಜಾಹಿದ್ ಮಾಹಿತಿ ನೀಡಿದ್ದಾರೆ.
