- Kannada News Photo gallery Tips to increase credit card limit how to improve credit limit check here personal finance advice in Kannada
Credit Limit: ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಏನೆಲ್ಲ ಮಾಡಬಹುದು? ಇಲ್ಲಿದೆ ಟಿಪ್ಸ್
ಕ್ರೆಡಿಟ್ ಕಾರ್ಡ್ ಎಂಬುದು ಪ್ರಸ್ತುತ ದಿನಗಳಲ್ಲಿ ವೇತನದಾರ ಮಧ್ಯಮವರ್ಗದ ದೈನಂದಿನ ಅಗತ್ಯಗಳಲ್ಲೊಂದಾಗಿಬಿಟ್ಟಿದೆ. ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ನೆರವಾಗುವುದರಿಂದ ಹಿಡಿದು ಹಲವಾರು ಪ್ರಯೋಜನಗಳನ್ನು ಕ್ರೆಡಿಟ್ ಕಾರ್ಡ್ಗಳಿಂದ ಪಡೆದುಕೊಳ್ಳಬಹುದಾಗಿದೆ. ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ ಇದ್ದವರಿಗೆ, ಅದನ್ನು ಹೆಚ್ಚಿಸಬೇಕೆಂಬ ಬಯಕೆ ಸಾಮಾನ್ಯ. ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸಲು ಅನುಸರಿಸಬಹುದಾದ ಕೆಲವು ವಿಧಾನಗಳು ಇಲ್ಲಿವೆ.
Updated on:Feb 06, 2023 | 11:32 AM

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದನ್ನು ಮಾತ್ರ ತಪ್ಪಿಸಬೇಡಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಸಾಲ ಪಡೆಯುವ ಅರ್ಹತೆ ಮೇಲೆ ನಕಾರಾತ್ಮಕ ಪರಿಣಾಮವಾಗಲಿದೆ. ಅವಧಿ ಮುಗಿದ ಬಳಿಕ ಬಿಲ್ ಪಾವತಿಸುವುದಕ್ಕೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಹೆಚ್ಚು ಬಡ್ಡಿ ಪಾವತಿಸಿಯೂ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಕ್ಕಿಂತ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವುದು ಒಳ್ಳೆಯದು. ಆದರೆ ಇದಕ್ಕೂ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ ಎಂಬುದು ತಿಳಿದಿರಲಿ.

Converting credit card Bill into EMIs pros and cons here in Kannada

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವ ಬದಲು ವಸ್ತುಗಳ ಖರೀದಿ ವೇಳೆಯೇ ನೋ ಕಾಸ್ಟ್ ಇಎಂಐ ಇದ್ದರೆ ಆ ಆಯ್ಕೆಯನ್ನು ಬಳಸುವುದು ಉತ್ತಮ. ಇದರಿಂದ ಬಡ್ಡಿ ಪಾವತಿಸುವುದನ್ನು ತಪ್ಪಿಸಬಹುದು.

ವಸ್ತುಗಳ ಖರೀದಿ ವೇಳೆ ನಿಮಗೆ ‘ಝೀರೋ ಕಾಸ್ಟ್ ಅಥವಾ ನೋ ಕಾಸ್ಟ್ ಇಎಂಐ’ ಆಯ್ಕೆಗಳನ್ನು ಬ್ಯಾಂಕ್ಗಳು ನೀಡಬಹುದು. ಸಾಮಾನ್ಯವಾಗಿ ಮೂರರಿಂದ 12 ತಿಂಗಳ ವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಬ್ಯಾಂಕ್ಗಳು ನೀಡುತ್ತವೆ. ಆದಾಗ್ಯೂ ಪ್ರೊಸೆಸಿಂಗ್ ಶುಲ್ಕದಂಥ ಹಿಡನ್ ಚಾರ್ಜಸ್ ಬಗ್ಗೆ ಗಮನ ಹರಿಸಿ.

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವಾಗ ಬಡ್ಡಿ ದರ ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚಿರಬಹುದು ಎಂಬುದು ಗಮನದಲ್ಲಿರಲಿ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಇಎಂಐಗೆ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ.

ಕ್ರೆಡಿಟ್ ಕಾರ್ಡ್ ಬಿಲ್ ನಿರೀಕ್ಷೆಗಿಂತ ಹೆಚ್ಚು ಬಂದಿದ್ದಾಗ, ಒಂದೇ ಬಾರಿಗೆ ಪಾವತಿಸುವುದು ಕಷ್ಟಸಾಧ್ಯವಾದಾಗ ಇಎಂಐ ಆಗಿ ಪರಿವರ್ತಿಸುವುದು ಉತ್ತಮ ವಿಧಾನ. ಇದರಿಂದ ನಿಮಗೆ ಹಣಕಾಸು ಒತ್ತಡ ನಿಭಾಯಿಸುವುದು ಸುಲಭವಾಗಲಿದೆ. ನಿರ್ದಿಷ್ಟ ಬಡ್ಡಿಗೆ ನಿಗದಿಪಡಿಸಿದ ಅವಧಿಗೆ ಇಎಂಐ ಆಗಿ ಪರಿವರ್ತಿಸಲು ಅವಕಾಶ ದೊರೆಯುತ್ತದೆ.

ಸಮಯಕ್ಕೆ ಸರಿಯಾಗಿ ಇಎಂಐ ಅಥವಾ ಕ್ರೆಡಿಟ್ ಬಿಲ್ ಪಾವತಿ ಮಾಡುವುದು ಕೂಡ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡುವ ಮೂಲಕ ನಿಮಗೆ ಸಾಲ ಮರುಪಾವತಿಯ ಸಾಮರ್ಥ್ಯ ಚೆನ್ನಾಗಿದೆ ಎಂಬುದನ್ನು ಬ್ಯಾಂಕ್ಗೆ ನಿರೂಪಿಸಿ ತೋರಿಸಬಹುದು. ಪರಿಣಾಮವಾಗಿ ಬ್ಯಾಂಕ್ ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಬಹುದು.
Published On - 11:30 am, Mon, 6 February 23



















