Tokyo Olympics: ಆಟದ ವೇಳೆ ರವಿ ದಹಿಯಾ ಕೈ ಕಚ್ಚಿದ ಎದುರಾಳಿ! ಧೃತಿಗೆಡದೆ ವೈರಿಯ ಹೆಡೆಮುರಿ ಕಟ್ಟಿದ ಭಾರತದ ಕುಸ್ತಿಪಟು

Edited By:

Updated on: Aug 09, 2021 | 7:01 PM

Tokyo Olympics: ಈ ಪಂದ್ಯದ ಸಮಯದಲ್ಲಿ, ರವಿ ದಹಿಯಾ ಅವರ ಕೈಯನ್ನು ಎದುರಾಳಿ ಕುಸ್ತಿಪಟು ನೂರ್ ಇಸ್ಲಾಮ್ ಸನಾಯೆವ್ ಕಚ್ಚಿದರು.

1 / 6
ಭಾರತದ ಕುಸ್ತಿಪಟು ರವಿ ದಹಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಎರಡನೇ ಕುಸ್ತಿಪಟು ಎನಿಸಿಕೊಂಡರು. ಅವರು 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಸೋಲಿಸಿ ಫೈನಲ್​ಗೇರಿದ್ದಾರೆ. ಇದಕ್ಕೂ ಮುನ್ನ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಈ ಹಿಂದೆ, ದಹಿಯಾ ಎರಡೂ ಪಂದ್ಯಗಳನ್ನು ತಾಂತ್ರಿಕ ಪ್ರಾವೀಣ್ಯತೆಯ ಆಧಾರದ ಮೇಲೆ ಗೆದ್ದಿದ್ದರು.

ಭಾರತದ ಕುಸ್ತಿಪಟು ರವಿ ದಹಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಎರಡನೇ ಕುಸ್ತಿಪಟು ಎನಿಸಿಕೊಂಡರು. ಅವರು 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಸೋಲಿಸಿ ಫೈನಲ್​ಗೇರಿದ್ದಾರೆ. ಇದಕ್ಕೂ ಮುನ್ನ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಈ ಹಿಂದೆ, ದಹಿಯಾ ಎರಡೂ ಪಂದ್ಯಗಳನ್ನು ತಾಂತ್ರಿಕ ಪ್ರಾವೀಣ್ಯತೆಯ ಆಧಾರದ ಮೇಲೆ ಗೆದ್ದಿದ್ದರು.

2 / 6

ಈ ಪಂದ್ಯದ ಸಮಯದಲ್ಲಿ, ರವಿ ದಹಿಯಾ ಅವರ ಕೈಯನ್ನು ಎದುರಾಳಿ ಕುಸ್ತಿಪಟು ನೂರ್ ಇಸ್ಲಾಮ್ ಸನಾಯೆವ್ ಕಚ್ಚಿದರು. ಕೋರ್ಟ್​ನಲ್ಲಿ ನೂರ್ ಇಸ್ಲಾಂನ ಭುಜವನ್ನು ರವಿ ನೆಲಕ್ಕೆ ತಾಗಿಸಲು ಪ್ರಯತ್ನಿಸುತ್ತಿದ್ದಾಗ ಇಸ್ಲಾಂ ಈ ಕೃತ್ಯ ಎಸಗಿದರು. ಆದರೆ ಭಾರತೀಯ ಕುಸ್ತಿಪಟು ನೋವನ್ನು ನುಂಗಿ ಎದುರಾಳಿಯ ಭುಜವನ್ನು ಸಂಪೂರ್ಣವಾಗಿ ನೆಲಕ್ಕೆ ತಾಗಿಸಿದರು.

3 / 6

ರವಿ ಅವರು ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್​ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮೀಸ್​ಗೆ ಅರ್ಹತೆಗಿಟ್ಟಿಸಿಕೊಂಡಿದ್ದರು.

4 / 6

ಇನ್ನೂ ಭಾರತದ ಖ್ಯಾತ ಕುಸ್ತಿತಿಪಟು ರವಿಕುಮಾರ್ ಇತಿಹಾಸ ನಿರ್ಮಿಸಿದ್ದಾರೆ. ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆದ್ದು ಭಾರತಕ್ಕೆ ಮಗದೊಂದು ಪದಕ ಖಾತ್ರಿಪಡಿಸಿದ್ದಾರೆ.

5 / 6

ರವಿ ದಹಿಯಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು. 1952 ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕೆಡಿ ಜಾಧವ್ ಮೊದಲ ಬಾರಿಗೆ ಕಂಚಿನ ಪದಕ ಗೆದ್ದಿದ್ದರು. ಅವರ ನಂತರ ಸುಶೀಲ್ ಬೀಜಿಂಗ್‌ನಲ್ಲಿ ಕಂಚು ಮತ್ತು ಲಂಡನ್‌ನಲ್ಲಿ ಬೆಳ್ಳಿ ಗೆದ್ದರು.

6 / 6

ಸುಶೀಲ್ ಒಲಿಂಪಿಕ್ಸ್‌ನಲ್ಲಿ ಎರಡು ವೈಯಕ್ತಿಕ ಈವೆಂಟ್ ಪದಕಗಳನ್ನು ಗೆದ್ದ ಏಕೈಕ ಭಾರತೀಯರಾದರು. ಇತ್ತೀಚೆಗೆ ಪಿವಿ ಸಿಂಧು ಅವರನ್ನು ಸರಿಗಟ್ಟಿದರು. ಯೋಗೇಶ್ವರ್ ದತ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮತ್ತೊಂದೆಡೆ, ಸಾಕ್ಷಿ ಮಲಿಕ್ 2016 ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

Published On - 10:51 pm, Wed, 4 August 21

Loading...
Unable to load recommendations.
Follow Us